ಧರ್ಮಸ್ಥಳ : ಆನ್ ಲೈನ್ ಮೂಲಕ ಮೋಸದ ಕೃತ್ಯವೆಸಗುವ ಉದ್ದೇಶಕ್ಕಾಗಿ ಸುಮಾರು 42 ಮೊಬೈಲ್ ಸಿಮ್ ಕಾರ್ಡ್ ಇಟ್ಟುಕೊಂಡಿದ್ದ ಐದು ಮಂದಿ ಯುವಕರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ನಡೆದಿದೆ.
ಆನ್ ಲೈನ್ ಮೂಲಕ ವ್ಯವಹಾರಕ್ಕಾಗಿ ಹಾಗೂ ಆನ್ ಲೈನ್ ಮೋಸದ ಕೃತ್ಯಗಳನ್ನು ಎಸಗುವ ಉದ್ದೇಶಕ್ಕಾಗಿ, ಅಪರಿಮಿತ ಮೊಬೈಲ್ ಸಿಮ್ ಕಾರ್ಡ್ ಗಳನ್ನು (ಒಟ್ಟು 42 ಮೊಬೈಲ್ ಸಿಮ್ ಕಾರ್ಡ್) ತಮ್ಮ ಸುಪರ್ಧಿಯಲ್ಲಿ ಇಟ್ಟುಕೊಂಡಿದ್ದ, ಐದು ಮಂದಿ ಯುವಕರನ್ನು ಫೆ.1 ರಂದು ಸಂಜೆ ಧರ್ಮಸ್ಥಳ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿ, ಧರ್ಮಸ್ಥಳ ಠಾಣಾ ಪೊಲೀಸರು ವಿಚಾರಣೆಯ ಸಲುವಾಗಿ ವಶಕ್ಕೆ ಪಡೆದಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ 05/2024 ಕಲಂ: 420 120 ಬಿ ಜೊತೆಗೆ 34 ಐ ಪಿ ಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























