ಧರ್ಮಸ್ಥಳ : ಮರಳು ಸಾಗಾಟ ಮಾಡುತ್ತಿದ್ದ ವಾಹನ ಸಹಿತ ಓರ್ವನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೀನ್ಯಾಜೆ ಎಂಬಲ್ಲಿ ನಡೆದಿದೆ.
ಫೆ.4 ರಂದು ಧರ್ಮಸ್ಥಳ ಠಾಣಾ ಉಪನಿರೀಕ್ಷಕರಾದ ಅನಿಲ್ ಕುಮಾರ್ ಡಿ. ಹಾಗೂ ಸಿಬ್ಬಂದಿಗಳು ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ಕೀನ್ಯಾಜೆ ಎಂಬಲ್ಲಿ ಪಿಕಪ್ ವಾಹನವನ್ನು ಪರಿಶೀಲಿಸಿದಾಗ ಪಿಕಪ್ ನಲ್ಲಿ ಮರಳನ್ನು ತುಂಬಿಸಿರುವುದು ಕಂಡು ಬಂದಿದ್ದು, ಸದ್ರಿ ವಾಹನ ಚಾಲಕ ಹರೀಶ್ ಎಂಬಾತನನ್ನು ವಿಚಾರಿಸಿದಾಗ, ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿಯನ್ನು ಪಡೆಯದೇ ಸರಕಾರಕ್ಕೆ ಯಾವುದೇ ರಾಜಸ್ವವನ್ನು ಪಾವತಿಸದೇ, ಅನಧಿಕೃತವಾಗಿ ನದಿಯಿಂದ ಅಕ್ರಮವಾಗಿ ಮರಳನ್ನು ಕಳವು ಮಾಡಿಕೊಂಡು ಹೋಗುತ್ತಿರುವುದು ಕಂಡು ಬಂದಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ಹರೀಶ್ ನನ್ನು ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ 06/2024 ಕಲಂ: 379 ಐ ಪಿ ಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























