ಪುತ್ತೂರು : ಐಟಿ ಡೀಲರ್ಸ್ ಅಸೋಸಿಯೇಷನ್ ನ ಲೋಕಾರ್ಪಣಾ ಕಾರ್ಯಕ್ರಮವು ಫೆ.10 ರಂದು ದರ್ಬೆಯ ಸಚ್ಚಿದಾನಂದ ಸಭಾಭವನದಲ್ಲಿ ನಡೆಯಲಿದೆ.
ಪುತ್ತೂರು ಚೇಂಬರ್ಸ್ ಆಫ್ ಕಾಮರ್ಸ್ ನ ಪ್ರೆಸಿಡೆಂಟ್ ರೊ. ವಾಮನ್ ಪೈ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಜೆಸಿಐ ಇಂಡಿಯಾದ ನ್ಯಾಷನಲ್ ಟ್ರೈನರ್, ಬರಹಗಾರ ಜೆಸಿ. ಕೃಷ್ಣ ಮೋಹನ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಸಂಜೆ 5.30 ರಿಂದ 7ರವರೆಗೆ ಅಸೋಸಿಯೇಷನ್ ಮೀಟಿಂಗ್ ನಡೆಯಲಿದೆ. ರಾತ್ರಿ 8.15ರಿಂದ 9.15ರ ವರೆಗೆ Dahua Technology ಆಶ್ರಯದಲ್ಲಿ ಸಿಸಿಟಿವಿ ಪ್ರೊಡಕ್ಟ್ಸ್ ಪ್ರೆಸೆಂಟೇಶನ್ ನಡೆಯಲಿದೆ ಎಂದು ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

























