ವಿಟ್ಲ : ಗಾಳಿಹಿತ್ಲು ಎಂಬಲ್ಲಿ ಸರಕಾರಿ ಬೀಗಮುದ್ರೆ ಹಾಕಿರುವ ಜಾಗದಲ್ಲಿ ಅನ್ಯಕೋಮಿನ ಯುವಕರ ತಂಡ ಅಕ್ರಮ ಪ್ರವೇಶ ಮಾಡಿ ಪುಟ್ಬಾಲ್ ಆಟವಾಡುವ ನೆಪದಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ದೂರು ನೀಡಿರುವ ಘಟನೆ ನಡೆದಿದೆ.

ವಿಟ್ಲ ಸಮೀಪದ ಗಾಳಿಹಿತ್ಲು ಎಂಬ ಪ್ರದೇಶದಲ್ಲಿ ಹಳೆಯದಾದ ಕಟ್ಟಡಗಳಿದ್ದು, ಈಗ ಕಟ್ಟಡಗಳೆಲ್ಲ ದುರಸ್ಥಿ ಇಲ್ಲದೆ ನೆಲಸಮವಾಗಿದೆ.

ಇತ್ತೀಚಿಗೆ ತಾಲೂಕು ಪಂಚಾಯತ್ ನವರು ಆ ಸ್ಥಳಕ್ಕೆ ಗೇಟ್ ಅಳವಡಿಸಿ ಸರಕಾರಿ ಬೀಗಮುದ್ರೆ ಹಾಕಿದ್ದು, ಕೆಲ ದಿನಗಳಿಂದ ಯುವಕರ ತಂಡ ಅಕ್ರಮ ಪ್ರವೇಶ ಮಾಡಿ ಫುಟ್ಬಾಲ್ ಆಟವಾಡುವ ನೆಪದಲ್ಲಿ ಹುಡುಗಿಯರನ್ನು ಚುಡಾಯಿಸುವುದು, ಬೊಬ್ಬೆ ಹಾಕಿ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯನ್ನು ನೀಡುತ್ತಿದ್ದು, ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಾರ್ವಜನಿಕ ವಲಯದಿಂದ ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು.


























