ಪುತ್ತೂರು : ಹೈಟೆಕ್ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿರುವ ಬೇಕರಿ ಮತ್ತು ಆನ್ಲೈನ್ ಸಂಸ್ಥೆಯಿಂದ ಲಕ್ಷಾಂತರ ರೂ. ಕಳವುಗೈದಿರುವ ಬಗ್ಗೆ ವರದಿಯಾಗಿದೆ.
ಬಸ್ ನಿಲ್ದಾಣದ ಒಳಗಿನ ಬೇಕರಿಯೊಂದರ ರೋಲಿಂಗ್ ಶೆಟರ್ ನ ಬೀಗ ಮುರಿದು ಒಳಗಿದ್ದ ಸಾವಿರಾರು ರೂ. ನಗದು ಕಳವು ಮಾಡಲಾಗಿದೆ. ಬಸ್ ನಿಲ್ದಾಣದ ಕೆಳ ಅಂತಸ್ತಿನಲ್ಲಿರುವ ಸಂಸ್ಥೆಯಿಂದ ಲಕ್ಷಾಂತರ ರೂ. ನಗದು ಕಳವು ಮಾಡಲಾಗಿದೆ ಎಂದು ವರದಿಯಾಗಿದೆ.
ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕೃತ್ಯ ಎಸಗಿರುವ ಆರೋಪಿ ಒಬ್ಬನೇ ಎನ್ನಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




























