ಪುತ್ತೂರು : ಮಂಗಳೂರಿನಲ್ಲಿ ಫೆ.17 ರಂದು ನಡೆಯುವ ಕಾಂಗ್ರೆಸ್ ರಾಜ್ಯ ಸಮಾವೇಶವನ್ನು ಯಶಸ್ವಿಗೊಳಿಸಲು ಕಾರ್ಯಕರ್ತರು ಸಜ್ಜಾಗಿದ್ದಾರೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ತಿಳಿಸಿದರು.

ಅವರು ಪುತ್ತೂರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ನಗರ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿ, ಶಾಸಕ ಅಶೋಕ್ ಕುಮಾರ್ ರೈ ಯವರ ನೇತೃತ್ವದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಒಟ್ಟು 10.000 ಜನ ಈ ಸಮಾವೇಶದಲ್ಲಿ ಬಾಗವಹಿಸಿವ ನಿರೀಕ್ಷೆ ಇಟ್ಟು ಕೊಳ್ಳಲಾಗಿದೆ. ಇದಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆಯನ್ನು ಅಶೋಕ್ ಕುಮಾರ್ ರೈ ಮಾಡಿದ್ದಾರೆ, ನಗರ ಕಾಂಗ್ರೆಸ್ ವತಿಯಿಂದ ಸುಮಾರು 2,000 ದಷ್ಟು ಜನರನ್ನು ನಾವು ಈ ಸಮಾವೇಶಕ್ಕೆ ಕರೆದುಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಅದಕ್ಕಾಗಿ ನಗರ ಕಾಂಗ್ರೆಸ್ ಪದಾಧಿಕಾರಿಗಳು, ನಗರ ಸಭಾ ಸದಸ್ಯರು, ಬೂತ್ ಅಧ್ಯಕ್ಷರುಗಳು ಶ್ರಮಿಸಬೇಕಾಗಿದೆ. ಶಾಸಕರು ಈಗಾಗಲೇ ಬಸ್ ಗಳ ವ್ಯವಸ್ಥೆ ಮಾಡಿದ್ದು, ಪ್ರತಿಯೊಂದು ಬೂತ್ ಗಳಿಂದ ಕನಿಷ್ಠ 20 ಜನರನ್ನು ಈ ಸಮಾವೇಶದಲ್ಲಿ ಬಾಗವಹಿಸಲು ಕ್ರಮಕೈಗೊಳ್ಳಿ ಎಂದು ತಿಳಿಸಿದರು.

ಶನಿವಾರ ಬೆಳಿಗ್ಗೆ 10.00ಕ್ಕೆ ದರ್ಬೆ ಬೈಪಾಸ್ ನಲ್ಲಿ ಶಾಸಕರ ಚುನಾವಣಾ ಕಚೇರಿಯಲ್ಲಿ ಎಲ್ಲರೂ ಸೇರಬೇಕು ಅಲ್ಲಿ ತಿಂಡಿ ತಿಂದು ಮಂಗಳೂರಿಗೆ ಹೊರಡುವುದು, ಮಂಗಳೂರಿನಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ, ಬಳಿಕ ಸಮಾವೇಶದಲ್ಲಿ ಭಾಗವಹಿಸುವುದು ಎಂದು ಸಮಾವೇಶದ ವ್ಯವಸ್ಥೆಯ ಬಗ್ಗೆ ತಿಳಿಸಿದರು.
ಸಭೆಯನ್ನು ಉದ್ದೇಶಿಸಿ ಕೆಪಿಸಿಸಿ ಸಂಯೋಜಕ ಪ್ರದೀಪ್ ಕುಮಾರ್ ರೈ ಪಾಂಬಾರು ಮಾತನಾಡಿ, ಸಮಾವೇಶವನ್ನು ಯಶಸ್ವಿಗೊಳಿಸಲು ಮನವಿ ಮಾಡಿದರು.
ಸಭೆಯಲ್ಲಿ ನಗರ ಸಭಾ ಸದಸ್ಯರಾದ ದಿನೇಶ್ ಕೆ ಸೇವಿರೆ, ಯೂಸುಫ್ ಡ್ರೀಮ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕ್ಯಾರೇನಸ, ಬ್ಲಾಕ್ ಕಾರ್ಯದರ್ಶಿಗಳಾದ ರೋಷನ್ ರೈ ಬನ್ನೂರು, ರಾಮಚಂದ್ರ ನಾಯ್ಕ್ ಮಂಜಲ್ಪಡ್ಪು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ಅರಸ್, ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷ ಶರೀಫ್ ಬಲ್ನಾಡ್, ಪುತ್ತೂರು ಭೂನ್ಯಾಯ ಮಂಡಲಿ ಸದಸ್ಯ ಮಂಜುನಾಥ್ ಕೆಮ್ಮಾಯಿ, ಎನ್.ಎಸ್.ಯುಐ ನ ಎಡ್ವರ್ಡ್, ನಗರ ಕಾಂಗ್ರೆಸ್ ಪದಾಧಿಕಾರಿಗಳು, ಬೂತ್ ಅಧ್ಯಕ್ಷರುಗಳು ಭಾಗವಹಿಸಿದ್ದರು.
ಕಲಾವಿದ ಕೃಷ್ಣಪ್ಪ ಸ್ವಾಗತಿಸಿ, ದಾಮೋದರ್ ಭಂಡಾರ್ಕರ್ ವಂದಿಸಿದರು. ಸಮಾವೇಶದ ಯಶಸ್ವಿಗೆ ಜವಾಬ್ದಾರಿ ನೀಡಲಾಯಿತು.
ಬನ್ನೂರು -ಪಡ್ಡಾಯೂರು
- ರೋಷನ್ ರೈ ಬನ್ನೂರು
- ಲೋಕೇಶ್ ಪಡ್ಡಾಯೂರು
- ಶಾರದಾ ಅರಸ್
- ಸಾಹಿರಾ ಬಾನು ಬನ್ನೂರು
- ಮಹಾಬಲ ಪೂಜಾರಿ
- ಜಾನ್ಸನ್ ಗಲ್ಪಾವೋ, ಬನ್ನೂರು
- ರಶೀದ್ ಮುರ
ಮೊಟ್ಟೆತಡ್ಕ -ಕೂರ್ನಡ್ಕ
- ಶೈಲಾ ಪೈ- ಕೌನ್ಸಿಲರು
- ಯೂಸುಫ್ ಡ್ರೀಮ್ -ಕೌನ್ಸಿಲರ್
- ಸುರೇಶ ಪೂಜಾರಿ ಮೊಟ್ಟೆತಡ್ಕ
- ರಫೀಕ್ ಮೊಟ್ಟೆತಡ್ಕ
- ಅಬ್ದುಲ್ಲ ಮೊಟ್ಟೆತಡ್ಕ
- ರೋನಿ ಮೊಂತೆರೊ ಮೊಟ್ಟೆತಡ್ಕ(ಬೂತ್ ಅಧ್ಯಕ್ಷರು)
- ರವೀಂದ್ರ ರೈ ಮೊಟ್ಟೆತಡ್ಕ (ಬೂತ್ ಅಧ್ಯಕ್ಷರು)
- ಮುಕೇಶ್ ಕೆಮ್ಮಿ0ಜೆ
- ವಿಜಯಲಕ್ಷ್ಮೀ ಕೂರ್ನಡ್ಕ
ನೆಹರು ನಗರ – ಮಂಜಲ್ಪಡ್ಪು
- ದಿನೇಶ್ ಕೆ ಸೇವಿರೆ, ಕೌನ್ಸಿಲರು
- ರಾಮಚಂದ್ರ ನಾಯ್ಕ್ ಮಂಜಲ್ಪಡ್ಪು
- ವಿಕ್ಟರ್ ಪಾಯ್ಸ್, ಮಂಜಲ್ಪಡ್ಪು
- ಕಲಾವಿದ ಕೃಷ್ಣಪ್ಪ ಕಲ್ಲೇಗ
- ನವಾಜ್ ಕಾರ್ಜಾಲ್ (ಬೂತ್ ಅಧ್ಯಕ್ಷರು)
- ಜಯಂತ ಕಲ್ಲೇಗ
- ಸುಜಿತ್ ನೆಹರು ನಗರ
- ಶೇಖರಸೇವಿರೆ
- ನವೀನ್ ನಾಯ್ಕ್ ನೆಹರು ನಗರ
- ಹರಿಪ್ರಸಾದ್ ಸೇವಿರೆ
ಸಾಲ್ಮರ -ಕೃಷ್ಣನಗರ -ನೆಲ್ಲಿ ಕಟ್ಟೆ
- ಮಂಜುನಾಥ್ ಕೆಮ್ಮಾಯಿ.
- ಇಸ್ಮಾಯಿಲ್ ಸಾಲ್ಮರ
- ಶರತ್ ಕೇಪುಲು
- ಅಲ್ಫೋನ್ಸ್
- ದಾಮೋದರ್ ಭಂಡಾರ್ಕರ್
- ದೇವಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ
- ಬೆಳಿಯಪ್ಪ ಪೂಜಾರಿ ರೋಟರಿಪುರ
- ಬಾಲಕೃಷ್ಣ ನಾಯ್ಕ್ ನೆಲ್ಲಿಕಟ್ಟೆ



























