ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬ ಗಾದೆಯಂತೆ, ಪ್ರಸ್ತುತ ಪ್ರಪಂಚದಲ್ಲಿ ಮೊಬೈಲ್ಗೊಂದು ಕಾಲ ರೀಲ್ಸ್ಗೊಂದು ಕಾಲ ಎಂಬ ಮಾತು ಹೊಂದಾಣಿಕೆಯಾಗುತ್ತಿದೆ. ಕೆಲವರು ರೀಲ್ಸ್ ಅನ್ನು ಒಳ್ಳೆಯ ರೀತಿಗೆ ಬಳಸಿಕೊಂಡರೆ, ಇನ್ನು ಹಲವರು ಕೆಟ್ಟದ್ದಾಗಿ ಬಳಸಿಕೊಳ್ಳುತ್ತಿದ್ದಾರೆ. ಮಾತ್ರವಲ್ಲದೆ, ರೀಲ್ಸ್ ಮೂಲಕ ಅದೆಷ್ಟೋ ಜನರು ಲಕ್ಷಾಂತರ ರೂಪಾಯಿ ಹಣ ಗಳಿಸುವವರು ಇದ್ದಾರೆ. ಆದರೆ ಇದೀಗ ಕರ್ನಾಟಕ ಸರ್ಕಾರ ಕೂಡ ರೀಲ್ಸ್ ಮಾಡಿ ಬಹುಮಾನ ಗೆಲ್ಲುವ ಅವಕಾಶವನ್ನು ತೆರೆಡದಿಟ್ಟಿದೆ.
ಹೌದು. ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ರೀಲ್ಸ್ ಮಾಡಿ ನಗದು ಗೆಲ್ಲುವ ಅವಕಾಶವನ್ನು ತೆರೆದಿಟ್ಟಿದೆ. ಪ್ರಥಮ ಬಹುಮಾನವಾಗಿ 50 ಸಾವಿರ ರೂಪಾಯಿ, ದ್ವಿತೀಯ ಬಹುಮಾನವಾಗಿ 25 ಸಾವಿರ ರೂಪಾಯಿ, ತೃತೀಯ ಬಹುಮಾನವಾಗಿ 15 ಸಾವಿರ ರೂಪಾಯಿ ಗೆಲ್ಲುವ ಅವಕಾಶ ನೀಡಿದೆ.
ರೀಲ್ಸ್ ಮಾಡಲು ವಿಷಯಗಳನ್ನು ನೀಡಿದೆ. ಮೂಲಭೂತ ಕರ್ತವ್ಯಗಳು, ಸಂವಿಧಾನದ ಮಹತ್ವ, ಮೂಲಭೂತ ಹಕ್ಕುಗಳು, ಪೀಠೀಕೆಯ ವೈಶಿಷ್ಟ್ಯ ಅಥವಾ ಸಂವಿಧಾನಕ್ಕೆ ಸಂಬಂಧಿಸಿದ ಯಾವುದಾದರೂ ಅಂಶಗಳ ಮೇಲೆ ರೀಲ್ಸ್ ಮಾಡಿದರೆ ಮಾತ್ರ ಬಹುಮಾನ ಗೆಲ್ಲಬಹುದಾಗಿದೆ.
ರೀಲ್ಸ್ ಮಾಡಿದ ಬಳಿಕ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಅಥವಾ bcac2024@gmail.comಗೆ ಮೇಲ್ ಮಾಡಿ ನೋಂದಾಯಿಸಿಕೊಳ್ಳಬೇಕಿದೆ. ಇದಕ್ಕಾಗಿ ಫೆಬ್ರವರಿ 20ರ ಸಂಜೆ 5 ಗಂಟೆಗಳವರೆಗೆ ಸಮಯ ನೀಡಿದೆ.
ಸಂವಿಧಾನದ ಜಾಗೃತಿ ಜಾಥಾದ ಅಂಗವಾಗಿ pic.twitter.com/QkdJ1g4Knm
— Dr H.C.Mahadevappa (@CMahadevappa) February 12, 2024