ಅಡ್ಯನಡ್ಕ : ಎಜುಕೇಶನಲ್ ಸೊಸೈಟಿ ವತಿಯಿಂದ ತಾಯಂದಿರ ಮಹಾ ಸಮಾವೇಶ ಕಾರ್ಯಕ್ರಮವು ಜನತಾ ವಿದ್ಯಾಸಂಸ್ಥೆಗಳ ವಾರಣಾಶಿ ಕೃಷ್ಣ ಸಭಾಭವನದಲ್ಲಿ ನಡೆಯಿತು.

‘ಸುಂದರ ನಾಳೆಗೆ, ತಾಯಂದಿರ ಬೆಸುಗೆ’ ಹಾಗೂ ‘ಸಮೃದ್ಧ ಸುಶಿಕ್ಷಿತ ಕುಟುಂಬ ಬಂಧಕ್ಕೆ ದಿವ್ಯ ಸುಗಂಧ’ ಇದು ಸಮಾವೇಶದ ಘೋಷವಾಕ್ಯವಾಗಿತ್ತು. ಸಮಾವೇಶದಲ್ಲಿ ‘ಮಕ್ಕಳ ಬೆಳವಣಿಗೆಯಲ್ಲಿ ತಾಯಂದಿರ ಸಹಯೋಗ’ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಿತು.
ಅಡ್ಯನಡ್ಕ ಎಜುಕೇಶನಲ್ ಸೊಸೈಟಿ ಅಡ್ಯನಡ್ಕ ಇದರ ಅಧ್ಯಕ್ಷರಾದ ಗೋವಿಂದ ಪ್ರಕಾಶ ಸಾಯ ಅವರು ದೀಪ ಪ್ರಜ್ವಲನದ ಮೂಲಕ ಸಮಾವೇಶ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳು ಆರಂಭಗೊಂಡು ಶತಮಾನ ಪೂರೈಸುತ್ತಿದೆ. ಜನತಾ ವಿದ್ಯಾಸಂಸ್ಥೆಯಲ್ಲಿ ಮಕ್ಕಳಿಗೆ ಅನೇಕ ಆಧುನಿಕ ಶಿಕ್ಷಣ ಸೌಲಭ್ಯಗಳು, ಅನುಕೂಲತೆಗಳು ಲಭ್ಯವಿವೆ ಎಂದರು.
ಎಣ್ಮಕಜೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಆಯಿಷಾ ಎ. ಎ. ಪರ‍್ಲ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಇಂದು ಸರ್ವರಂಗಗಳಲ್ಲಿಯೂ ಪಾತ್ರ ನಿಭಾಯಿಸುತ್ತಾರೆ. ಸ್ತ್ರೀ ಸಮಾಜದ ಶಕ್ತಿಯಾಗಿದ್ದಾಳೆ ಎಂದರು.

ಮಂಗಳೂರಿನ ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘ ಇದರ ಅಧ್ಯಕ್ಷರಾದ ಸುಮಾ ಅರುಣ್ ಮಾನ್ವಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಮಕ್ಕಳು ಪೋಷಕರ ಪ್ರತಿಬಿಂಬವಾಗಿದ್ದಾರೆ. ಅವರೊಡನೆ ಅನ್ಯೋನ್ಯತೆಯಿಂದಿದ್ದು, ಅವರ ಪ್ರತಿಭೆಯನ್ನು ಬೆಳಕಿಗೆ ತರಲು ಪುಷ್ಟಿ ನೀಡುವುದು ತಾಯಂದಿರ ಮಹತ್ವದ ಜವಾಬ್ದಾರಿ ಎಂದು ಹೇಳಿದರು.
ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಆಡಳಿತಾಧಿಕಾರಿ ರಮೇಶ ಎಂ. ಬಾಯಾರು ಪ್ರಸ್ತಾವಿಸಿದರು.
ಜನತಾ ವಿದ್ಯಾಸಂಸ್ಥೆಗಳ ಸಂಚಾಲಕಿ ಡಾ. ಅಶ್ವಿನಿ ಕೃಷ್ಣಮರ‍್ತಿ ಅವರು ಸಮಾರೋಪ ಭಾಷಣ ಮಾಡುತ್ತಾ, ಮಕ್ಕಳ ಸರ್ವಾಂಗೀಣ ಬೆಳವಣಿಗೆಯು ತಾಯಂದಿರ ಲಾಲನೆ ಪಾಲನೆಯಿಂದ ಆರಂಭವಾಗುತ್ತದೆ. ಇಂದು ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಜನತಾ ವಿದ್ಯಾಸಂಸ್ಥೆಗಳು ಹೆಸರು ಪಡೆದಿವೆ ಎಂದರು.

ಉಪಾಹಾರವನ್ನು ಒದಗಿಸಿದ ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯರಾದ ಕೇಶವ ಭಟ್ ಚರ‍್ಕಾಡು ಮತ್ತು ಪ್ರಸನ್ನ ಕುಮಾರ್ ಮುಳಿಯಾಲ, ತಾಯಂದಿರ ಮಹಾ ಸಮಾವೇಶದ ಆಮಂತ್ರಣ ಪತ್ರಿಕೆಯ ಮುದ್ರಣವನ್ನು ಪ್ರಾಯೋಜಿಸಿದ ಗೋವಿಂದರಾಯ ಶೆಣೈ, ಶಾಲಾ ಸಭಾಭವನಕ್ಕೆ 210 ಆಸನಗಳನ್ನು ಕೊಡುಗೆಯಾಗಿ ನೀಡಿದ ಸಚ್ಚಿದಾನಂದ ಶಾಸ್ತ್ರಿ ನೆಕ್ಕರೆ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮವನ್ನು ಸಂಘಟಿಸಿದ ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಆಡಳಿತಾಧಿಕಾರಿ ರಮೇಶ ಎಂ. ಬಾಯಾರು ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಜನತಾ ವಿದ್ಯಾಸಂಸ್ಥೆಗಳ ಎಲ್ಲಾ ವಿದ್ಯಾರ್ಥಿಗಳ ತಾಯಂದಿರು ಹಾಗೂ ನೆರೆಹೊರೆಯ ತಾಯಂದಿರು ಸಮಾವೇಶಕ್ಕೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಆಡಳಿತ ಮಂಡಳಿ ಸದಸ್ಯರು, ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಜನತಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ. ಶ್ರೀನಿವಾಸ್ ಸ್ವಾಗತಿಸಿದರು. ವಿದ್ಯಾರ್ಥಿನಿಯರು ಸ್ಫೂರ್ತಿ ಗೀತೆ ಹಾಡಿದರು.
ರಾಜಗೋಪಾಲ ಜೋಶಿ ಎಸ್., ವೀಣಾ ಟಿ., ಶೀನಪ್ಪ ನಾಯ್ಕ್ ಕೆ., ಹಾಗೂ ಭವ್ಯ ಆರ್. ಶೆಟ್ಟಿ ಗಣ್ಯರನ್ನು ಪರಿಚಯಿಸಿದರು. ಜಯಶ್ರೀ ಕೆ. ಆರ್. ಕಾರ್ಯಕ್ರಮ ನಿರೂಪಿಸಿ, ಸೋಮಶೇಖರ ಎಚ್. ವಂದಿಸಿದರು.