ಮುಂಡೂರು : ಮುಂಡೂರು ಗ್ರಾಮ ಪಂಚಾಯತ್ ಸದಸ್ಯರ ವಿಶಿಷ್ಟ ರೀತಿಯ ಕೋವಿಡ್ ಸೋಂಕು ಬಗ್ಗೆ ಜಾಗೃತಿ ಅಭಿಯಾನ ಮತ್ತು ಮನೆ ಭೇಟಿ ಕಾರ್ಯಕ್ರಮಕ್ಕೆ ಮುಂಡೂರು 1ನೇ ವಾರ್ಡಿನಲ್ಲಿ ಅಧಿಕೃತ ವಾಗಿ ಚಾಲನೆ ನೀಡಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪ ಗೌಡ ಅಭಿಯಾನ ಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ಪುತ್ತಿಲ. ಬಾಲಕೃಷ್ಣ ಪೂಜಾರಿ,ಅರುಣಾ ಕಣ್ಣರ್ನೂಜಿ, ಶ್ರೀರಾಮ ಗೆಳೆಯರ ಬಳಗದ ಸದಸ್ಯರಾದ ಪ್ರಸಾದ್ ಬಿಕೆ, ಶಿವಪ್ಪ ನಾಯ್ಕ್, ಸ್ಥಳೀಯ ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ, ಅನಿಲ್ ಕಣ್ಣರ್ನೂಜಿ, ಮತ್ತಿತರರು ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಶ್ರೀರಾಮ ಗೆಳೆಯರ ಬಳಗ ಮತ್ತು ಗ್ರಾಮ ಪಂಚಾಯತ್ ಸದಸ್ಯರ ಜಂಟಿ ಆಶ್ರಯದಲ್ಲಿ ಸೊಂಕೀತರ ಮನೆಗೆ ದಿನಸಿ ಸಾಮಗ್ರಿಗಳನ್ನು ನೀಡಲಾಯಿತು. ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆ ಭೇಟಿ ಕಾರ್ಯವನ್ನು ಪಂಚಾಯತ್ ಸದಸ್ಯರು ಹಾಗೂ ಸಂಘ ಸಂಸ್ಥೆಗಳು ಸೇರಿಕೊಂಡು ಕೋವಿಡ್ ಮುಕ್ತ ಮಾಡುವಲ್ಲಿ ಅಧ್ಯಕ್ಷರು ಶಕ್ತಿ ಮೀರಿ ಶ್ರಮಿಸುತ್ತಿದ್ದು, ಪ್ರತಿಯೊಬ್ಬರೂ ಕೂಡ ಆಶಾ ಕಾರ್ಯಕರ್ತರೊಂದಿಗೆ ಸಹಕರಿಸಿ ವ್ಯಾಕ್ಸಿನ್ ಕಡ್ಡಾಯವಾಗಿ ಹಾಕಿಸಿಕೊಂಡು ಕೋವಿಡ್ ನಿರ್ಮೂಲನೆಗೆ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯ ಕೂಡ ಆಗಿದೆ ಎಂದರು.
1ನೇ ವಾರ್ಡಿನ ಜವಾಬ್ದಾರಿಯನ್ನು ಪಂಚಾಯತ್ ಸದಸ್ಯರ ಜೊತೆ ಶ್ರೀರಾಮ ಗೆಳೆಯರ ಬಳಗದ ಸದಸ್ಯರು ಕಾರ್ಯ ನಿರ್ವಹಿಸಲಿದ್ದಾರೆ. ಶ್ರೀರಾಮ ಗೆಳೆಯರ ಕೋವಿಡ್ ಸಹಾಯ ವಾಣಿ ಕೇಂದ್ರದ ಸದಸ್ಯರು ಸಕ್ರಿಯವಾಗಿ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.