ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉಳ್ಳಾಲ ತಾಲೂಕಿನ ಹರೇಕಳದಲ್ಲಿ ಡಿವೈಎಫ್‍ಐ ಸಂಘಟನೆ ತನ್ನ ರಾಜ್ಯ ಸಮ್ಮೇಳನ ಪ್ರಚಾರಕ್ಕಾಗಿ ಹಾಕಿರುವ ಟಿಪ್ಪು ಸಲ್ತಾನ್‍ನ ಕಟೌಟ್ ತೆರವು ಮಾಡಲು ಪೊಲೀಸ್ ಇಲಾಖೆ ನೋಟೀಸ್ ನೀಡಿದೆ.
ಫೆ.25 ರಿಂದ 27 ರವರೆಗೆ ಮಂಗಳೂರಿನ ತೊಕ್ಕೊಟ್ಟಿನಲ್ಲಿ ಡಿವೈಎಫ್‍ಐ ನ ರಾಜ್ಯ ಸಮ್ಮೇಳನ ನಡೆಯಲಿದೆ. ಇದರ ಪ್ರಚಾರಾರ್ಥವಾಗಿ ಹರೇಕಳ ಡಿವೈಎಫ್‍ಐ ಸಮಿತಿ ಬ್ಯಾನರ್ ಬಂಟಿಂಗ್ಸ್ ಹಾಕಿ 6 ಅಡಿ ಎತ್ತರದ ಟಿಪ್ಪುಸುಲ್ತಾನ್ ನ ಕಟೌಟ್ ಹಾಕಿದ್ದಾರೆ.
ಆದರೆ ಯಾವುದೇ ಪರವಾನಿಗೆ ಪಡೆಯದೆ ಹಾಕಿರುವ ಕಟೌಟ್ ಆಗಿರೋದ್ರಿಂದ ತಕ್ಷಣ ತೆರವು ಮಾಡಬೇಕೆಂದು ಕೊಣಾಜೆ ಪೊಲೀಸರು ನೋಟೀಸ್ ನೀಡಿದ್ದಾರೆ.
ಕಟೌಟ್ ತೆರವುಗೊಳಿಸಲು ಮುಂದಾದ ಕೊಣಾಜೆ ಪೊಲೀಸರ ವಿರುದ್ಧ ಡಿವೈಎಪ್ ಐ ಜಿಲ್ಲಾಧ್ಯಕ್ಷ ಇಮ್ತಿಯಾಝ್ ಆಕ್ರೋಶ ವ್ಯಕ್ತಪಡಿಸಿದ್ದು, ಟಿಪ್ಪು ,ರಾಣಿ ಅಬ್ಬಕ್ಕ ಸೇರಿದಂತೆ ಯಾರೊಬ್ಬರ ಕಟೌಟ್ ತೆರವುಗೊಳಿಸದಂತೆ ಡಿವೈಎಫ್ ಐ ಕಾರ್ಯಕರ್ತರು ಕಾವಲಿರುತ್ತಾರೆಂದು ಇಮ್ತಿಯಾಝ್ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.