ಪುತ್ತೂರು:ಮಂಗಳೂರು ಆಸ್ಪತ್ರೆಯೊಂದರಲ್ಲಿ
ಉದ್ಯೋಗದಲ್ಲಿದ್ದ ಬಡಗನ್ನೂರು ಪಟ್ಟೆ ನಿವಾಸಿ ಯುವಕ
ಅನಾರೋಗ್ಯದಿಂದಾಗಿ ನಿಧನರಾಗಿದ್ದು ಅವರಿಗೆ ಕೋವಿಡ್ ವರದಿ ಪಾಸಿಟಿವ್ ಬಂದಿದೆ.
ಪಟ್ಟೆ ಶ್ರೀ ಕೃಷ್ಣ ಹಿ.ಪ್ರಾ.ಶಾಲಾ ನಿವೃತ್ತ ಮುಖ್ಯಶಿಕ್ಷಕಿ
ಶಂಕರಿ ಮತ್ತು ಪಡಮಲೆ ಶಾಲಾ ನಿವೃತ್ತ ಮುಖ್ಯಶಿಕ್ಷಕ
ನಾರಾಯಣ ಪಾಟಾಳಿಯವರ ಪುತ್ರ ಪ್ರಮೋದ್ ಪಿ.ಎನ್.
(34ವ.) ಮೃತಪಟ್ಟವರು.
ಮಂಗಳೂರಿನ ಯೆನೆಪೋಯ ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿದ್ದ ಅವರು ಅನಾರೋಗ್ಯಕ್ಕೀಡಾಗಿ ಮಂಗಳೂರು ಯುನಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧನರಾಗಿದ್ದಾರೆ. ಅವರಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿದ್ದು ಕೋವಿಡ್ ನಿಯಮಗಳೊಂದಿಗೆ ಸೇವಾ ಭಾರತಿ ಕಾರ್ಯಕರ್ತರ ಸಹಕಾರದೊಂದಿಗೆ ಪಟ್ಟೆ ಮನೆಯಲ್ಲಿ ಮೃತರ ಅಂತ್ಯ ಸಂಸ್ಕಾರ ನಡೆಸಲಾಯಿತು.ಮೃತರು ತಂದೆ, ತಾಯಿ, ಪತ್ನಿ
ತುಳಸಿ ಹಾಗೂ ಆರು ವರ್ಷ ಪ್ರಾಯದ ಮಗ ನಿವೇದ್ ಅವರನ್ನು ಅಗಲಿದ್ದಾರೆ.