ಪುತ್ತೂರು : ಎಸ್.ಡಿ.ಪಿ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು, ಎಸ್.ಡಿ.ಪಿ ರೆಮಿಡೀಸ್ & ರಿಸರ್ಚ್ ಸೆಂಟರ್ ಪ್ರಾಯೋಜಕತ್ವದಲ್ಲಿ ‘ಕಲೋಪಾಸನಾ-2024’ ಸಾಂಸ್ಕೃತಿಕ ಕಲಾ ಸಂಭ್ರಮ ಫೆ.24 ರಿಂದ 26ರವರೆಗೆ ಸಂಜೆ 6 ಗಂಟೆಗೆ ಎಸ್.ಡಿ.ಪಿ ರೆಮಿಡೀಸ್ & ರಿಸರ್ಚ್ ಸೆಂಟರ್ ಆವರಣ ಪರ್ಲಡ್ಕದಲ್ಲಿ ನಡೆಯಲಿದೆ.
ಫೆ.24 ರಂದು ಕೆ.ಎಂ.ಸಿ ನ್ಯೂರೋ ಸರ್ಜನ್ ಡಾ. ಸಿ.ಕೆ. ಬಲ್ಲಾಳ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಬಳಿಕ ಖ್ಯಾತ ಗಾಯಕರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ-ಹಿಂದೂಸ್ಥಾನಿ ಸಂಗೀತ ಜುಗಲ್ ಬಂದಿ ನಡೆಯಲಿದೆ.
ಫೆ.25 ರಂದು ಭರತಾಂಜಲಿ ನೃತ್ಯ ಸಂಸ್ಥೆಯಿಂದ ‘ಹರೇ ರಾಮ ಹರೇ ಕೃಷ್ಣಾ’ ಭರತ ನೃತ್ಯಗಾಥಾ ಮೂಡಿಬರಲಿದೆ.
ಫೆ.26 ರಂದು ಶ್ರೀಹನುಮಗಿರಿ ಮೇಳದವರಿಂದ ‘ಇಂದ್ರಪ್ರಸ್ಥ’ ಯಕ್ಷಗಾನ ಮೂಡಿಬರಲಿದೆ ಎಂದು ಎಸ್.ಡಿ.ಪಿ ರೆಮಿಡೀಸ್ & ರಿಸರ್ಚ್ ಸೆಂಟರ್ ನಿರ್ದೇಶಕರಾದ ಡಾ. ಹರಿಕೃಷ್ಣ ಪಾಣಾಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
