ಪುತ್ತೂರು : ಕರ್ನಾಟಕ ಜಾನಪದ ಪರಿಷತ್ ಪುತ್ತೂರು ಘಟಕದ ಸಮಿತಿ ರೂಪೀಕರಣ ಸಭೆಯು ಪುತ್ತೂರಿನಲ್ಲಿ ನೆರವೇರಿತು.
ಘಟಕದ ಗೌರವಾಧ್ಯಕ್ಷರಾಗಿ ಖ್ಯಾತ ದೈವ ನರ್ತಕ ಮತ್ತು ಎಸ್.ಡಿ.ಎಂ. ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ರವೀಶ್ ಪಡುಮಲೆ ಹಾಗೂ ಗೌರವ ಸಲಹೆಗಾರರಾಗಿ ಕಲಾ ಪೋಷಕರಾದ ಸುರೇಶ್ ಆಳ್ವ ಸಾಂತ್ಯ ಮತ್ತು ಪಿ.ವಿಶ್ವನಾಥ ಪೂಜಾರಿ ಅವರನ್ನು ನೇಮಕ ಮಾಡಲಾಯಿತು.

ಪುತ್ತೂರು ಘಟಕದ ಅಧ್ಯಕ್ಷರಾಗಿ ಪ್ರಗತಿ ಹಾಸ್ಪಿಟಲ್ ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಂತೋಷ್ ಕುಮಾರ್ ರೈ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಅಕ್ಷಯ ಕಾಲೇಜು ಪುತ್ತೂರಿನ ಪ್ರಾಂಶುಪಾಲರಾದ ಸಂಪತ್ ಕೆ ಪಕ್ಕಳ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ವಿವೇಕಾನಂದ ಕಾಲೇಜು ಪುತ್ತೂರಿನ ಕನ್ನಡ ಪ್ರಾಧ್ಯಾಪಕಿ ಡಾ. ಮೈತ್ರಿ ಭಟ್ ಮತ್ತು ಸಾಮಾಜಿಕ ಕಾರ್ಯಕರ್ತ ಸುಧಾಕರ ಕುಲಾಲ್ ನರಿಮೊಗ್ರು ನೇಮಕಗೊಂಡರು.
ಜೊತೆ ಕಾರ್ಯದರ್ಶಿಗಳಾಗಿ ಅಕ್ಷಯ ಕಾಲೇಜು ಪುತ್ತೂರಿನ ಗ್ರಂಥಪಾಲಕಿ ಪ್ರಭಾವತಿ ಕೆ. ಮತ್ತು ಸಂತ ಫಿಲೋಮಿನಾ ಪ.ಪೂ. ಕಾಲೇಜಿನ ಉಪನ್ಯಾಸಕಿ ಸುಮನಾ ರಾವ್ ಆಯ್ಕೆಯಾದರೆ, ಕಲಾ ಪೋಷಕರಾದ ಎಂ. ಗಿರೀಶ್ ರೈ ಈಶ್ವರಮಂಗಲ ಸಂಘಟನಾ ಕಾರ್ಯದರ್ಶಿಯಾಗಿ ಮತ್ತು ವಿದ್ವಾನ್ ಗೋಪಾಲಕೃಷ್ಣ ವೀರಮಂಗಿಲ ಕೋಶಾಧಿಕಾರಿಯಾಗಿ ನೇಮಕವಾದರು.
ನಿವೃತ್ತ ಶಿಕ್ಷಕರಾದ ಅಚ್ಯುತ ಮಣಿಯಾಣಿ, ರಾಮಣ್ಣ ನಾಯ್ಕ ಬಸಿರಡ್ಕ, ರಾಮ ಮುಂಡ್ಯ, ಶ್ರೀಧರ ಪೂಜಾರಿ ಗೆಜ್ಜೆಗಿರಿ, ಪವನ್ ಶೇಖರ ಆಚಾರ್ಯ ಬಿಂತೋಡಿ ಕಾವು ಇವರುಗಳು ಸಮಿತಿ ಸದಸ್ಯರಾಗಿ ಆಯ್ಕೆಗೊಂಡರು.


























