ಪುತ್ತೂರು: ಪುಣಚ ಸಾಯಿನಾಥ ಎಂಟರ್ ಪ್ರೈಸಸ್ ಮಾಲಕ ಬೈಲುಗುತ್ತು ದೇವಸ್ಯ ನಿವಾಸಿ ದಿನೇಶ್ ರೈ(52 ವ) ರವರು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.
ಮೃತರು ತಾಯಿ ಸಂಪಾವತಿ ರೈ, ಪತ್ನಿ ದೀಪಾ ರೈ, ಪುತ್ರಿಯರಾದ ದಿಶಾ ರೈ, ದೀಕ್ಷಾ ರೈ ಹಾಗೂ ಸಹೋದರರನ್ನು ಅಗಲಿದ್ದಾರೆ.