Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    (ಫೆ.05): ಬೈಪಾಸ್ ರಸ್ತೆಯ ಬಪ್ಪಳಿಗೆ ಟವರ್ ನಲ್ಲಿ ತಮನ್ವಿ ಸಿಲ್ಕ್ಸ್ ಶುಭಾರಂಭ…!!

    (ಫೆ.05): ಬೈಪಾಸ್ ರಸ್ತೆಯ ಬಪ್ಪಳಿಗೆ ಟವರ್ ನಲ್ಲಿ ತಮನ್ವಿ ಸಿಲ್ಕ್ಸ್ ಶುಭಾರಂಭ…!!

    ಪುತ್ತೂರು: ಪಿ.ಜಿ. ಜಗನ್ನಿವಾಸ ರಾವ್ ನೀಡಿದ ದೂರಿನ ಹಿನ್ನಲೆ; ಠಾಣೆಗೆ ಹಾಜರಾಗಲು ಪ್ರತಿಭಾ ಕುಳಾಯಿಗೆ ನೋಟಿಸ್..!!

    ಪುತ್ತೂರು: ಪಿ.ಜಿ. ಜಗನ್ನಿವಾಸ ರಾವ್ ನೀಡಿದ ದೂರಿನ ಹಿನ್ನಲೆ; ಠಾಣೆಗೆ ಹಾಜರಾಗಲು ಪ್ರತಿಭಾ ಕುಳಾಯಿಗೆ ನೋಟಿಸ್..!!

    ಪುತ್ತೂರು: ರಸ್ತೆಗೆ ಬಿದ್ದ ತೆಂಗಿನ ಮರ: ವಿದ್ಯುತ್ ತಂತಿಗೆ ಹಾನಿ..!!

    ಪುತ್ತೂರು: ರಸ್ತೆಗೆ ಬಿದ್ದ ತೆಂಗಿನ ಮರ: ವಿದ್ಯುತ್ ತಂತಿಗೆ ಹಾನಿ..!!

    ಮಾವನಿಂದ ಅನುಚಿತ ವರ್ತನೆ, ಹಲ್ಲೆ ಹಾಗೂ ಜೀವ ಬೆದರಿಕೆ: ಪ್ರಕರಣ ದಾಖಲು…!!!

    ಮಾವನಿಂದ ಅನುಚಿತ ವರ್ತನೆ, ಹಲ್ಲೆ ಹಾಗೂ ಜೀವ ಬೆದರಿಕೆ: ಪ್ರಕರಣ ದಾಖಲು…!!!

    ಹೆಜಮಾಡಿ ಟೋಲ್ ಬಳಿ ಮದ್ಯದ ನಶೆಯಲ್ಲಿ ಕೇರಳ ವಿದ್ಯಾರ್ಥಿಗಳ ಹುಚ್ಚಾಟ: ವಿಡಿಯೋ ವೈರಲ್​..!!

    ಹೆಜಮಾಡಿ ಟೋಲ್ ಬಳಿ ಮದ್ಯದ ನಶೆಯಲ್ಲಿ ಕೇರಳ ವಿದ್ಯಾರ್ಥಿಗಳ ಹುಚ್ಚಾಟ: ವಿಡಿಯೋ ವೈರಲ್​..!!

    ಸೋಶಿಯಲ್ ಮೀಡಿಯಾ ವಿಡಿಯೋ ಎಫೆಕ್ಟ್ :  ಹೇರ್ ಸ್ಟೈಟ್ ಮಾಡಲು ತಲೆ ಕೂದಲಿಗೆ ಬೆಂಕಿ  ಹಚ್ಚಿಕೊಂಡು ಪ್ರಾಣಬಿಟ್ಟ ಬಾಲಕ

    ಬೆಟ್ಟಂಪಾಡಿ: ವಿಷ ಪದಾರ್ಥ ಸೇವಿಸಿದ ಯುವಕ ಮೃತ್ಯು…!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ರಾಜಕೀಯ

ಹಿಂದೂ ಧಾರ್ಮಿಕ ದತ್ತಿ ತಿದ್ದುಪಡಿ ವಿಧೇಯಕ ತಿರಸ್ಕೃತ : ಸಂಭ್ರಮಿಸಿದ ಬಿಜೆಪಿ

February 24, 2024
in ರಾಜಕೀಯ, ರಾಜ್ಯ
0
ಹಿಂದೂ ಧಾರ್ಮಿಕ ದತ್ತಿ ತಿದ್ದುಪಡಿ ವಿಧೇಯಕ ತಿರಸ್ಕೃತ : ಸಂಭ್ರಮಿಸಿದ ಬಿಜೆಪಿ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಬೆಂಗಳೂರು : ತೀವ್ರ ಕುತೂಹಲ ಮೂಡಿಸಿದ್ದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ತಿದ್ದುಪಡಿ ಮಸೂದೆಗೆ ಹಿನ್ನಡೆಯಾಗಿದೆ. ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಹಿಂದೂ ಧಾರ್ಮಿಕ ವಿಧೇಯಕ ಪರಿಷತ್​ನಲ್ಲಿ ತಿರಸ್ಕೃತಗೊಂಡಿದೆ.

Advertisement
Advertisement
Advertisement

ಮುಜರಾಯಿ ಇಲಾಖೆ ಸಚಿವ ರಾಮಲಿಂಗರೆಡ್ಡಿ ಅವರು ಮೊದಲು ಪರಿಷತ್​ನಲ್ಲಿ ವಿಧೇಯಕ ಮಂಡಿಸಿದರು.

ಈ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಪರ-ವಿರೋಧದ ಚರ್ಚೆ ಆಗಿದ್ದು, ಅಂತಿಮವಾಗಿ ಉಪ ಸಭಾಪತಿ ಪ್ರಾಣೇಶ್ ಅವರು ವಿಧೇಯಕವನ್ನು ಧ್ವನಿ ಮತಕ್ಕೆ ಹಾಕಿದರು. ಆದ್ರೆ, ಸದನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

Advertisement
Advertisement

ವಿಧೇಯಕವನ್ನು ಧ್ವನಿ ಮತಕ್ಕೆ ಹಾಕಿದ್ದು, ವಿಧೇಯಕ ಪರ 7 ಮತ, ವಿಧೇಯಕದ ವಿರುದ್ಧ 18 ಮತ ಚಲಾವಣೆಯಾಗಿವೆ. ಈ ಹಿನ್ನೆಲೆಯಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ವಿಧೇಯಕ ತಿರಸ್ಕೃತವಾಯ್ತು.ಇದರ ಬೆನ್ನಲ್ಲೇ ಬಿಜೆಪಿ ಸದಸ್ಯರು ಜೈ ಶ್ರೀರಾಮ್ ಘೋಷಣೆ ಕೂಗಿದರು. ಇನ್ನು ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್​ ಸದಸ್ಯರು ಭಾರತ್​ ಮಾತಾಕಿ ಜೈ, ಜೈ ಭೀಮ್​ ಎಂದು ಘೋಷಣೆ ಕೂಗಿದರು.

ಟಿ20 ಮ್ಯಾಚ್​​ನಂತೆ ಕುತೂಹಲ ಮೂಡಿಸಿದ್ದ ಬಿಲ್

ಹುಂಡಿ ಹಣಕ್ಕೆ ಸರ್ಕಾರ ಕೈ ಹಾಕಿದೆ ಎಂಬ ವಿವಾದಕ್ಕೆ ಕಾರಣವಾಗಿದ್ದ ಹಿಂದೂ ಧಾರ್ಮಿಕ ದೇವಸ್ಥಾನಗಳ ತಿದ್ದುಪಡಿ ಬಿಲ್ ತೀವ್ರ ಕುತೂಹಲ ಮೂಡಿಸಿತು. ಬಿಲ್ ತಿರಸ್ಕೃತ ಆಗುವ ಮೊದಲು ದೊಡ್ಡ ಹೈಡ್ರಾಮಾವೇ ನಡೆದಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ತಿದ್ದುಪಡಿ ವಿಧೇಯಕವನ್ನು ಇಂದು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಮಂಡನೆ ಮಾಡಿದರು. ವಿಧೇಯಕದಲ್ಲಿ ಇದ್ದ ತಿದ್ದುಪಡಿ ಅಂಶಗಳಿಗೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ತೀವ್ರವಾದ ಆಕ್ಷೇಪ ಮತ್ತು ವಿರೋಧವನ್ನು ವ್ಯಕ್ತಪಡಿಸಿದರು.

ಒಂದು ಕೋಟಿಗಿಂತಲೂ ಹೆಚ್ಚು ಆದಾಯ ಇರುವ ದೇವಸ್ಥಾನಗಳ ಒಟ್ಟು ಆದಾಯದಿಂದ ಶೇಕಡ 10% ರಷ್ಟು ನಿಧಿ ಸಂಗ್ರಹಣೆ ಮಾಡುವ ನಿರ್ಧಾರವನ್ನು ಕೈಬಿಡಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಈ ಅಂಶವನ್ನು ಕೈಬಿಟ್ಟರೆ ಮಾತ್ರ ವಿಧೇಯಕ್ಕೆ ಬೆಂಬಲಿಸುತ್ತವೆ ಇಲ್ಲದೇ ಹೋದರೆ ವಿದೇಯಕಕ್ಕೆ ವಿರೋಧಿಸುತ್ತವೆ ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಒಂದು ಹಂತದಲ್ಲಿ ಬಿಜೆಪಿ ಸದಸ್ಯರ ಆಗ್ರಹಕ್ಕೆ ಮಣಿಯಲು ಮುಂದಾದ ಸಚಿವ ರಾಮಲಿಂಗರೆಡ್ಡಿ ಸೋಮವಾರ ಬಿಲ್ಲನ್ನ ಮತ್ತೆ ಮಂಡಿಸುತ್ತೇನೆ ಎಂದು ಪ್ರಸ್ತಾಪಿಸಿದರು. ಇದಕ್ಕೆ ನಿಯಮಗಳಲ್ಲಿ ಅವಕಾಶ ಇಲ್ಲ ಎಂದು ಆಕ್ಷೇಪಿಸಿದ ಉಪ ಸಭಾಪತಿ ಪ್ರಾಣೇಶ್ ಒಮ್ಮೆ ಪರ್ಯಾಲೋಚನೆಗೆ ತೆಗೆದುಕೊಂಡ ಬಿಲ್ಲನ್ನು ಮತಕ್ಕೆ ಹಾಕಬೇಕಾಗುತ್ತದೆ ಎಂದು ಸೂಚಿಸಿದರು.

ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುವುದಕ್ಕೆ ಕಾಲಾವಕಾಶ ಕೇಳಿದ ರಾಮಲಿಂಗ ರೆಡ್ಡಿ ಅವರಿಗೆ ಹತ್ತು ನಿಮಿಷಗಳ ಕಾಲ ಕಲಾಪವನ್ನು ಮುಂದೂಡಲಾಯಿತು. ಈ ಸಮಯದಲ್ಲಿ ಭಾರಿ ಕುತೂಹಲ ಮೂಡಿಸಿದ ಹಿಂದೂ ಧಾರ್ಮಿಕ ಬಿಲ್ ಭವಿಷ್ಯ ಏನಾಗಬಹುದು ಎನ್ನುವ ಕುತೂಹಲ 20 20 ಮ್ಯಾಚ್ ರೀತಿಯಲ್ಲಿ ಕಂಡು ಬಂತು. ಆಡಳಿತ ಪಕ್ಷದ ಸದಸ್ಯರು ಸಚಿವ ರಾಮಲಿಂಗ ರೆಡ್ಡಿ ಜೊತೆ ಸುಧೀರ್ಘ ಚರ್ಚೆ ನಡೆಸಿದ ಬಳಿಕ ಯಾವುದೇ ಫಲಪ್ರದವಾಗಲಿಲ್ಲ. ಕೊನೆಗೆ ಸಭಾಪತಿ ಸ್ಥಾನದಲ್ಲಿದ್ದ ಎಂ.ಕೆ. ಪ್ರಾಣೇಶ್ ವಿಧೇಯಕವನ್ನ ದ್ವನಿ ಮತಕ್ಕೆ ಹಾಕಿದರು. ಆದ್ರೆ, ಬಿಜೆಪಿಯ ಒಟ್ಟು 18 ಸದಸ್ಯರು ಹಾಜರಿದ್ದರೆ ಕಾಂಗ್ರೆಸ್ ಪರವಾಗಿ ಕೇವಲ7 ಸದಸ್ಯರು ಮಾತ್ರ ಹಾಜರಿದ್ದರು. ಹೀಗಾಗಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ವಿಧೇಯಕ ಧ್ವನಿ ಮತದ ಮೂಲಕ ತಿರಸ್ಕೃತವಾಗಿದೆ.

ಸಾಕಷ್ಟು ಚರ್ಚೆಗೆ ಗ್ರಾಸವಾದ ವಿಧೇಯಕ

ಕರ್ನಾಟಕದಲ್ಲಿ 12 ವರ್ಷಗಳ ನಂತರ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು, ಧರ್ಮಾದಾಯ ದತ್ತಿಗಳ ವಿಧೇಯಕದಲ್ಲಿ ತಿದ್ದುಪಡಿ ತರಲು ಮುಂದಾಗಿದೆ. ಈಗಾಗಲೇ ವಿಧಾನಸಭೆಯಲ್ಲಿ ಅಂಗೀಕರಿಸಲಾದ ಈ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕದ ವಿಚಾರದಲ್ಲಿ ವಿವಾದ ಏರ್ಪಟ್ಟಿದೆ. ಅನುದಾನ ಬಳಕೆ, ದೇಗುಲಗಳ ಆದಾಯದ ಬಳಕೆ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ರಾಜಕೀಯವಾಗಿ ನಡೆದಿವೆ. ಹಿಂದೂ ದೇಗುಲಗಳ ಆದಾಯವನ್ನು ಇತರೆ ಧರ್ಮಗಳಿಗೆ ಬಳಸುವ ಹುನ್ನಾರ ಅಡಗಿದೆ ಎನ್ನುವುದು ಪ್ರತಿಪಕ್ಷಗಳ ಟೀಕೆಯಾದರೆ, ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ಹಾಗೂ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರೂ ಸಮರ್ಥಿಸಿಕೊಂಡಿದ್ದಾರೆ.

ದೇವಸ್ಥಾನಗಳ ಹುಂಡಿಗಳಲ್ಲಿ ಸಂಗ್ರಹವಾಗುವ ಹಣವನ್ನು ಹಿಂದೂ ಧರ್ಮದ ಧಾರ್ಮಿಕ ಆಚರಣೆಗಳಿಗೆ ಸಂಬಂಧಪಟ್ಟಂತೆ ಮಾತ್ರವೇ ಬಳಸಲಾಗುತ್ತದೆ. ಬೇರೆ ಯಾವುದೇ ಧರ್ಮದ ಜನರ ಅನುಕೂಲಕ್ಕಾಗಿ ಈ ಹಣವನ್ನು ಬಳಸಲಾಗುವುದಿಲ್ಲ. ದೇವಸ್ಥಾನಗಳ ಹಣವನ್ನು ಕೇವಲ ಹಿಂದೂ ಸಮುದಾಯದ ಏಳಿಗೆ ಮತ್ತು ಕಲ್ಯಾಣಕ್ಕೆ ಮಾತ್ರವೇ ಬಳಸಬೇಕೆನ್ನುವ ಬಾಧ್ಯತೆಯನ್ನು ಈ ನಿಧಿಯ ನಿಬಂಧನೆಗಳಲ್ಲಿ ಒತ್ತಿ ಹೇಳಲಾಗಿದೆ ಎನ್ನುವುದು ಸರ್ಕಾರ ವಾದವಾಗಿದೆ.

ಇನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕವನ್ನು ಮೊದಲು ಕಾಯಿದೆ ರೂಪ ನೀಡಿದ್ದು 1997ರಲ್ಲಿ. ಆನಂತರ 2003ರಲ್ಲಿ ತಿದ್ದುಪಡಿಯೊಂದಿಗೆ ಬಳಸಲಾಯಿತು. ಇದಾದ ನಂತರ 2012ರಲ್ಲಿ ಮತ್ತೊಮ್ಮೆ ತಿದ್ದುಪಡಿ ಮಾಡಲಾಗಿತ್ತು. ಇದಾದ ಬಳಿಕ ಕಾಯಿದೆಗೆ ನಾಲ್ಕನೇ ಬಾರಿಗೆ ತಿದ್ದುಪಡಿಯಾಗಿದೆ.

ತಿದ್ದುಪಡಿಯಲ್ಲಿ ಏನಿದೆ..!?

1997ರಲ್ಲಿ ಕಾಯಿದೆಯನ್ನು ಜಾರಿಗೊಳಿಸಿದಾಗಿನಿಂದಲೂ ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಸೃಜಿಸಬೇಕು ಎನ್ನುವ ನಿಬಂಧನೆ ಕಾಯಿದೆಯಲ್ಲಿಯೇ ಅಡಕವಾಗಿದೆ. ಆದರೆ ಅದು ಜಾರಿಯಾಗರಲಿಲ್ಲ. ಆನಂತರ 2003ರಲ್ಲಿ ಕಾಯಿದೆಯು ಜಾರಿಗೆ ಬಂದಾಗಿನಿಂದ ಧಾರ್ಮಿಕ ಕಾರ್ಯಗಳಿಗೆ ಮಾತ್ರವೇ ಬಳಕೆಯಾಗುತ್ತಿದೆ. ಅಲ್ಲಿಂದ ಈವರೆಗೂ ಎ ದರ್ಜೆ ದೇವಸ್ಥಾನಗಳ ಆದಾಯದಲ್ಲಿ ಸಾಮಾನ್ಯ ಸಂಗ್ರಹಣಾ ನಿಧಿಯಾಗಿ ಶೇ. 5ರಷ್ಟನ್ನು ಬಳಕೆ ಮಾಡಲಾಗುತ್ತಿತ್ತು. ಹೊಸ ತಿದ್ದುಪಡಿ ಪ್ರಕಾರ ಈ ಪ್ರಮಾಣ ಶೇ.10 ಕ್ಕೆ ಏರಿಕೆಯಾಗಲಿದೆ. ಉದಾಹರಣೆಗೆ ಒಂದು ಕೋಟಿ ರೂ. ವಾರ್ಷಿಕ ಆದಾಯ ಬಂದರೆ ಅದರಲ್ಲಿ 10 ಲಕ್ಷ ರೂ. ಸಾಮಾನ್ಯ ಸಂಗ್ರಹಣಾ ನಿಧಿಗೆ ಹೋಗಲಿದೆ. ನೂತನ ತಿದ್ದುಪಡಿಯನ್ನು ಸಾಮಾನ್ಯ ಸಂಗ್ರಹಣಾ‌ ನಿಧಿಯನ್ನು ಹೆಚ್ಚಿಸುವ ಏಕೈಕ ಉದ್ದೇಶದಿಂದ ಮಾಡಲಾಗಿದೆ ಎಂದು ಅಧಿಕೃತ ಕರ್ನಾಟಕ ರಾಜ್ಯ ಪತ್ರದಲ್ಲಿ ತಿಳಿಸಲಾಗಿದೆ.

Advertisement
Previous Post

ರಾಜ್ಯ ಬಿಜೆಪಿ ಪ್ರಮುಖರ ಸಭೆ ಅಂತ್ಯ : 5 ಹಂತದಲ್ಲಿ ಸಂಘಟನಾತ್ಮಕ ಸಭೆಗೆ ನಿರ್ಧಾರ..!

Next Post

ಗ್ರಾಹಕನ ಸೋಗಿನಲ್ಲಿ ಬಂದು 75 ಲಕ್ಷ ಮೌಲ್ಯದ ಡೈಮಂಡ್ ರಿಂಗ್​ ಎಗರಿಸಿದ ಖದೀಮ..!

OtherNews

ಎಂಎಲ್‌ಸಿ ಕಿಶೋ‌ರ್ ಬೊಟ್ಯಾಡಿಯವರ ಪತ್ನಿಯನ್ನು ಮೋದಿಯವರ ಸ್ವಾಗತಕ್ಕೆ ಕಳುಹಿಸಿದ ವಿಚಾರ : ಸಾಮಾನ್ಯ ಮಹಿಳೆಯನ್ನು ಪ್ರಧಾನಿಯವರ ಸ್ವಾಗತಕ್ಕೆ ಕಳುಹಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ – ಸತೀಶ್ ಕುಂಪಲ….!!!!
Featured

ಎಂಎಲ್‌ಸಿ ಕಿಶೋ‌ರ್ ಬೊಟ್ಯಾಡಿಯವರ ಪತ್ನಿಯನ್ನು ಮೋದಿಯವರ ಸ್ವಾಗತಕ್ಕೆ ಕಳುಹಿಸಿದ ವಿಚಾರ : ಸಾಮಾನ್ಯ ಮಹಿಳೆಯನ್ನು ಪ್ರಧಾನಿಯವರ ಸ್ವಾಗತಕ್ಕೆ ಕಳುಹಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ – ಸತೀಶ್ ಕುಂಪಲ….!!!!

December 6, 2025
ಪುತ್ತೂರು: ಬಿಜೆಪಿ ನಗರ ಮತ್ತು ಗ್ರಾಮಾಂತರ ಮಂಡಲ‌ಕ್ಕೆ ಹೊಸ ಪ್ರಧಾನ ಕಾರ್ಯದರ್ಶಿಗಳು..! ಪುತ್ತಿಲ ಪರಿವಾರದವರಿಗೆ ಕೋಕ್..?
Featured

ಪುತ್ತೂರು: ಬಿಜೆಪಿ ನಗರ ಮತ್ತು ಗ್ರಾಮಾಂತರ ಮಂಡಲ‌ಕ್ಕೆ ಹೊಸ ಪ್ರಧಾನ ಕಾರ್ಯದರ್ಶಿಗಳು..! ಪುತ್ತಿಲ ಪರಿವಾರದವರಿಗೆ ಕೋಕ್..?

November 27, 2025
ಋತುಚಕ್ರ ರಜೆ ನೀತಿ – 2025′ ಜಾರಿ : ಮಹಿಳೆಯರಿಗೆ ತಿಂಗಳಲ್ಲೊಂದು ದಿನ ವೇತನ ಸಹಿತ ರಜೆ..!!
Featured

ಋತುಚಕ್ರ ರಜೆ ನೀತಿ – 2025′ ಜಾರಿ : ಮಹಿಳೆಯರಿಗೆ ತಿಂಗಳಲ್ಲೊಂದು ದಿನ ವೇತನ ಸಹಿತ ರಜೆ..!!

October 10, 2025
ಅರುಣ್ ಕುಮಾರ್ ಪುತ್ತಿಲರಿಗೆ ನೀಡಿದ್ದ ಭರವಸೆ ವಿಚಾರ : ಪಕ್ಷದ ಸಭೆಯಲ್ಲಿ ಚರ್ಚೆಗೆ ಬಂದರೆ ಉತ್ತರಿಸುವೆ – ಸತೀಶ್ ಕುಂಪಲ…!!!
Featured

ಅರುಣ್ ಕುಮಾರ್ ಪುತ್ತಿಲರಿಗೆ ನೀಡಿದ್ದ ಭರವಸೆ ವಿಚಾರ : ಪಕ್ಷದ ಸಭೆಯಲ್ಲಿ ಚರ್ಚೆಗೆ ಬಂದರೆ ಉತ್ತರಿಸುವೆ – ಸತೀಶ್ ಕುಂಪಲ…!!!

September 12, 2025
ಪುತ್ತೂರು: ನಾಳೆಯಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು​ ಓಡಲ್ಲ..!!
Featured

ಪುತ್ತೂರು: ನಾಳೆಯಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು​ ಓಡಲ್ಲ..!!

August 4, 2025
ಪುತ್ತೂರು: ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಪ್ರಚಾರ ಸಮಿತಿ ಸಂಯೋಜಕರಾಗಿ ಚಂದ್ರಹಾಸ ಶೆಟ್ಟಿ, ಶಶಿಕಿರಣ್ ರೈ, ಪ್ರವೀಣ್ ನಾಯ್ಕ್ ನೇಮಕ..!!
Featured

ಪುತ್ತೂರು: ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಪ್ರಚಾರ ಸಮಿತಿ ಸಂಯೋಜಕರಾಗಿ ಚಂದ್ರಹಾಸ ಶೆಟ್ಟಿ, ಶಶಿಕಿರಣ್ ರೈ, ಪ್ರವೀಣ್ ನಾಯ್ಕ್ ನೇಮಕ..!!

July 29, 2025

Leave a Reply Cancel reply

Your email address will not be published. Required fields are marked *

Recent News

(ಫೆ.05): ಬೈಪಾಸ್ ರಸ್ತೆಯ ಬಪ್ಪಳಿಗೆ ಟವರ್ ನಲ್ಲಿ ತಮನ್ವಿ ಸಿಲ್ಕ್ಸ್ ಶುಭಾರಂಭ…!!

(ಫೆ.05): ಬೈಪಾಸ್ ರಸ್ತೆಯ ಬಪ್ಪಳಿಗೆ ಟವರ್ ನಲ್ಲಿ ತಮನ್ವಿ ಸಿಲ್ಕ್ಸ್ ಶುಭಾರಂಭ…!!

February 4, 2026
ಪುತ್ತೂರು: ಪಿ.ಜಿ. ಜಗನ್ನಿವಾಸ ರಾವ್ ನೀಡಿದ ದೂರಿನ ಹಿನ್ನಲೆ; ಠಾಣೆಗೆ ಹಾಜರಾಗಲು ಪ್ರತಿಭಾ ಕುಳಾಯಿಗೆ ನೋಟಿಸ್..!!

ಪುತ್ತೂರು: ಪಿ.ಜಿ. ಜಗನ್ನಿವಾಸ ರಾವ್ ನೀಡಿದ ದೂರಿನ ಹಿನ್ನಲೆ; ಠಾಣೆಗೆ ಹಾಜರಾಗಲು ಪ್ರತಿಭಾ ಕುಳಾಯಿಗೆ ನೋಟಿಸ್..!!

February 4, 2026
ಪುತ್ತೂರು: ರಸ್ತೆಗೆ ಬಿದ್ದ ತೆಂಗಿನ ಮರ: ವಿದ್ಯುತ್ ತಂತಿಗೆ ಹಾನಿ..!!

ಪುತ್ತೂರು: ರಸ್ತೆಗೆ ಬಿದ್ದ ತೆಂಗಿನ ಮರ: ವಿದ್ಯುತ್ ತಂತಿಗೆ ಹಾನಿ..!!

February 4, 2026
ಮಾವನಿಂದ ಅನುಚಿತ ವರ್ತನೆ, ಹಲ್ಲೆ ಹಾಗೂ ಜೀವ ಬೆದರಿಕೆ: ಪ್ರಕರಣ ದಾಖಲು…!!!

ಮಾವನಿಂದ ಅನುಚಿತ ವರ್ತನೆ, ಹಲ್ಲೆ ಹಾಗೂ ಜೀವ ಬೆದರಿಕೆ: ಪ್ರಕರಣ ದಾಖಲು…!!!

February 4, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page