ಯಾವ ಸಂಸಾರದಲ್ಲಿ ಜಗಳವಿರುವುದಿಲ್ಲ ಹೇಳಿ. ಜಗಳವಿದ್ದ ಕಡೆಯಲ್ಲಿ ಪ್ರೀತಿ ಹೆಚ್ಚಿರುತ್ತದೆ ಎನ್ನುವ ಮಾತಿದೆ. ಅತಿಯಾದ ಪ್ರೀತಿ, ಸಣ್ಣ ಪುಟ್ಟ ಮುನಿಸು ಜಗಳವಿದ್ದರೆ ಸಂಸಾರವೆನ್ನುವುದು ನೋಡಲು ಚಂದ. ಆದರೆ ಈ ಜಗಳವನ್ನೇ ದೊಡ್ಡದು ಮಾಡಿದರೆ ನಾಲ್ಕು ಗೋಡೆಗೆ ಸೀಮಿತವಾಗಿರಬೇಕಾದ ಜಗಳವು ಬೀದಿಗೆ ಬರುವುದಂತೂ ಪಕ್ಕಾ. ಇಲ್ಲೊಂದು ಜೋಡಿಯೂ ಸಂಸಾರದಲ್ಲಿನ ಜಗಳವನ್ನು ಮನೆಯಿಂದ ರಸ್ತೆಗೆ ತಂದಿದ್ದು, ಅಷ್ಟೇ ಆಗಿದ್ದರೆ ಏನು ಆಗುತ್ತಿರಲಿಲ್ಲ. ಕೊನೆಗೆ ಇವರಿಬ್ಬರ ಜಗಳವು ಚರಂಡಿಯವರೆಗೂ ತಲುಪಿದೆ.
ಗಂಡ ಹೆಂಡಿರ ಜಗಳದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಇವರಿಬ್ಬರೂ ಹೊಡೆದಾಡುವ ರೀತಿ ಕಂಡು ಇದೇನಪ್ಪಾ ಹೀಗೆ ಎನ್ನುತ್ತಿದ್ದಾರೆ.
ಪತಿ ಪತ್ನಿಯರಿಬ್ಬರೂ ಮನೆಯಿಂದ ಹೊರಗಡೆ ರಸ್ತೆಯಲ್ಲಿ ಜಗಳವನ್ನು ಶುರು ಮಾಡಿದ್ದಾರೆ. ಬೈಕ್‌ನಲ್ಲಿ ತೆರಳುವಾಗ ಬೈಕ್ ಹಾಳಾಗಿದ್ದು, ಇದೇ ಇವರಿಬ್ಬರ ನಡುವಿನ ಜಗಳಕ್ಕೆ ಕಾರಣವಾಗಿರುವಂತೆ ಕಾಣುತ್ತಿದೆ. ವೀಡಿಯೋದ ಪ್ರಾರಂಭದಲ್ಲಿ ಗಂಡ ಬೈಕ್ ಅನ್ನು ತಳ್ಳಿಕೊಂಡು ಹೋಗುತ್ತಿದ್ದಾನೆ. ಹೀಗಿರುವಾಗ ಹೆಂಡತಿಯು ಗಂಡದ ಬೆನ್ನಿಗೆ ಜೋರಾಗಿ ಗುದ್ದುತ್ತಾಳೆ. ಅಲ್ಲಿಂದ ಜಗಳವು ಶುರುವಾಗಿದ್ದು, ಇಬ್ಬರೂ ಕಿತ್ತಾಡಿಕೊಳ್ಳಲು ಶುರು ಮಾಡಿದ್ದಾರೆ. ಹೀಗೆ ಜೋರಾಗಿ ಹೊಡೆದಾಡುತ್ತಲೇ ಇಬ್ಬರೂ ಚರಂಡಿಗೆ ಬಿದ್ದಿದ್ದಾರೆ. ಆದರೆ ಅಲ್ಲಿಯೂ ಜಗಳವೇನು ನಿಂತಿಲ್ಲ. ನಾರುತ್ತಿರುವ ಚರಂಡಿಯ ನೀರಿನಲ್ಲಿಯೂ ಈ ದಂಪತಿಗಳು ಹೊಡೆದಾಡಿಕೊಂಡಿದ್ದಾರೆ.
ವೀಡಿಯೋವನ್ನು ಅಹ್ರಂತ್ ಶೆಲ್ಬೈ ಎನ್ನುವವರು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಮೊದಲು ಹಂಚಿಕೊಡಿದ್ದು, ಆ ಬಳಿಕ ಒಬ್ಬರಾದ ಮೇಲೆ ಒಬ್ಬರಂತೆ ಶೇರ್ ಮಾಡಿಕೊಂಡಿದ್ದಾರೆ. ಈ ಕ್ಲಿಪಿಂಗ್ಸ್ ವೈರಲ್ ಆಗುತ್ತಿದ್ದಂತೆ ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆದುಕೊಂಡಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಫೇಮಸ್ ಆಗಲು ಈ ಜೋಡಿ ಈ ರೀತಿ ಜಗಳವಾಡಿದ್ದಾರೆ ಎಂದಿದ್ದಾರೆ. ಇನ್ನು ಕೆಲವರು ವೀಡಿಯೋ ಮಾಡಿದ್ದು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.
ಆದರೆ, ಬಳಕೆದಾರರೊಬ್ಬರು, ‘ಇಂತಹ ಆದರ್ಶ ದಂಪತಿ ಎಲ್ಲಿಯೂ ಸಿಗುವುದಿಲ್ಲ’ ಎಂದರೆ , ಮತ್ತೊಬ್ಬರು ‘ಆ ಗಂಡನ ಪರಿಸ್ಥಿತಿ ಯಾರಿಗೂ ಬಾರದಿರಲಿ’ ಎಂದಿದ್ದಾರೆ. ಇನ್ನೊಬ್ಬರು ‘ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬುದೆಲ್ಲ ಸುಳ್ಳು ಇಲ್ಲಿ ನೋಡಿ ಗಂಡ ಹೆಂಡತಿ ಜಗಳ ಚರಂಡಿಗೆ ಬೀಳುವ ತನಕ’ ಎಂದು ಕಾಮೆಂಟ್ ಮಾಡಿದ್ದಾರೆ. ಈ ಎಲ್ಲಾ ಟೀಕೆಗಳ ನಡುವೆ ಕೆಲವರು ಈ ವೀಡಿಯೋವನ್ನು ಸಖತ್ ಎಂಜಾಯ್ ಮಾಡಿದ್ದಾರೆ.


























