ವಿಟ್ಲ : ಕೇಪು ಗ್ರಾಮ ಪಂಚಾಯತ್ ನ ಗುತ್ತುದಡ್ಕ ಹಿಂದೂ ರುದ್ರಭೂಮಿಯಲ್ಲಿ ಗ್ರಾ.ಪಂ ಅಧ್ಯಕ್ಷರು,ಸದಸ್ಯರು ಮತ್ತು ತ್ರಿಶೂಲ್ ಫ್ರೆಂಡ್ಸ್ ಕೇಪು ಇದರ ಸದಸ್ಯರುಗಳು ಶ್ರಮದಾನ ನಡೆಸಿದರು.
ಶ್ರಮದಾನದಲ್ಲಿ ಗ್ರಾ.ಪಂ.ಅಧ್ಯಕ್ಷರಾದ ಶ್ರೀಮತಿ ಯಶಸ್ವಿನಿ ಶಾಸ್ತ್ರಿ, ಸದಸ್ಯರಾದ ಪುರುಷೋತ್ತಮ ಕೆ, ಜಗಜ್ಜೀವನ್ ರಾಮ್ ಶೆಟ್ಟಿ, ಚಂದ್ರಶೇಖರ ಗೌಡ, ನಿಕಟಪೂರ್ವ ಅಧ್ಯಕ್ಷರಾದ ತಾರನಾಥ ಆಳ್ವ, ಗ್ರಾ.ಪಂ. ಸಿಬ್ಬಂದಿಗಳಾದ ಚಂದ್ರಶೇಖರ, ಸುಧಾಕರ, ರಮೇಶ ಮತ್ತು ವಿಜಯ ಸಾಲ್ಯಾನ್ ಬಡೆಕ್ಕೋಡಿ ಮತ್ತು ತ್ರಿಶೂಲ್ ಫ್ರೆಂಡ್ಸ್ ಕೇಪು ಇದರ ಸದಸ್ಯರುಗಳು ಪಾಲ್ಗೊಂಡಿದ್ದರು.