ಲಕ್ನೋ : ಉತ್ತರ ಪ್ರದೇಶದ ಬರೇಲಿಯ ಗ್ರಾಮವೊಂದರ ದೇವಾಲಯದ ಮುಂದೆ ಹಿಂದೂ ಯುವಕ, ಅನ್ಯಕೋಮಿನ ಯುವತಿ ಪರಸ್ಪರ ಹೂವಿನ ಹಾರಗಳನ್ನು ಬದಲಿಸಿಕೊಳ್ಳುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹಿಂದೂ ಯುವಕ ವಿಷ್ಣುಮೌರ್ಯ ಹಾಗೂ ಸೋನಮ್ ಸಿದ್ದೀಕಿ (26) ಎನ್ನುವ ಯುವತಿ ಬರೇಲಿಯ ದೇವರ್ಮಿಯಾ ಗ್ರಾಮದ ದೇವಾಲಯದ ಮುಂದೆ ವಿವಾಹವಾಗಿದ್ದಾರೆ.
ಸುಮಾರು 12 ವರ್ಷಗಳಿಂದ ಒಬ್ಬರಿಗೊಬ್ಬರು ಪರಿಚಯದಲ್ಲಿದ್ದರು. ಹೀಗಾಗಿ ಇದು ಇಬ್ಬರಲ್ಲಿ ಸ್ನೇಹ ಮೂಡಿಸಿದೆ. ನಂತರ ದಿನಗಳಲ್ಲಿ ಇದೇ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟು ಸದ್ಯ ಇಬ್ಬರು ಹೊಸ ಬದುಕಿಗೆ ವೆಲ್ಕಮ್ ಹೇಳಿದ್ದಾರೆ.
ಯುವತಿ ಸೋನಮ್ ಸಿದ್ದೀಕಿಗೆ ತ್ರಿವಳಿ ತಲಾಖ್ ಮತ್ತು ಹಲಾಲ್ ನಂತಹ ಆಚರಣೆಗಳು ಸರಿ ಕಾಣದ ಕಾರಣ ತಮ್ಮ ಧರ್ಮವನ್ನು ಬಿಟ್ಟು ಹಿಂದೂ ಧರ್ಮಕ್ಕೆ ಮತಾಂತರಗೊಂಡು ಲಕ್ಷ್ಮಿ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ಇದೀಗ ಮದುವೆಯಾಗಿದ್ದರಿಂದ ಶೀಘ್ರದಲ್ಲೇ ಶ್ರೀರಾಮ ದರ್ಶನ ಪಡೆಯಲು ಅಯೋಧ್ಯೆಯ ರಾಮಮಂದಿರಕ್ಕೆ ಇಬ್ಬರು ಹೋಗಿ ಬರುತ್ತೇವೆ ಎಂದು ಯುವತಿ ಹೇಳಿದ್ದಾರೆ ಎಂದು ಹೇಳಲಾಗಿದೆ.
ಸದ್ಯ ಈ ಇಬ್ಬರು ಮದುವೆ ಆಗಿರೋ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


























