ಬಹುಭಾಷಾ ನಟಿ ಶಿಲ್ಪಾ ಶೆಟ್ಟಿ ಅವರು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಬಾಲಿವುಡ್‌ನ ಗ್ಲಾಮರಸ್ ಬ್ಯೂಟಿ ಶಿಲ್ಪಾ ಶೆಟ್ಟಿ ಆಗಾಗ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಫ್ಯಾನ್ಸ್ಗಳ ಗಮನ ಸೆಳೆಯುತ್ತಾ ಇರುತ್ತಾರೆ. ಮಂಗಳೂರು ಮೂಲದ ಶಿಲ್ಪಾ ಶೆಟ್ಟಿ ಈಗ ಬೆಂಗಳೂರಿನಲ್ಲಿ ಹೊಸ ರೆಸ್ಟೋರೆಂಟ್ ತೆರೆದಿದ್ದಾರೆ.
ಶಿಲ್ಪಾ ಶೆಟ್ಟಿ ಈಗಾಗಲೇ ಮುಂಬೈನ ಎರಡು ಕಡೆಗಳಲ್ಲಿ ‘ಬಾಸ್ಟಿಯನ್’ ಅನ್ನೋ ಸೂಪರ್ ಹಿಟ್ ರೆಸ್ಟೊರೆಂಟ್ ನಡೆಸುತ್ತಿದ್ದಾರೆ.
ಪತಿ ರಾಜ್ ಕುಂದ್ರಾ ಜೊತೆ ಸೇರಿ ಶಿಲ್ಪಾ ಶೆಟ್ಟಿ ಈಗ ಮುಂಬೈನ ಅದೇ ಬ್ರಾಂಚ್ ಅನ್ನು ಬೆಂಗಳೂರಿನಲ್ಲಿ ಆರಂಭಿಸ್ತಿದ್ದಾರೆ. ಬೆಂಗಳೂರಿನ ಬಾಸ್ಟಿಯನ್ ಬಹು ದೊಡ್ಡ ಕಾರ್ಪೆಟ್ ಏರಿಯಾ ಹೊಂದಿದ್ದು, ಇಂಟೀರಿಯರ್ ಕೆಲಸ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಮಾರ್ಚ್ 2024ಕ್ಕೆ ‘ಬಾಸ್ಟಿಯನ್ ಬೆಂಗಳೂರು’ ಓಪನ್ ಆಗಲಿದೆ.
ಇನ್ನೂ ನೂತನ ರೆಸ್ಟೋರೆಂಟ್ ಹೊಸ ಫೋಟೋ ಹಾಗೂ ವೀಡಿಯೋಗಳನ್ನು ಶಿಲ್ಪಾ ಶೆಟ್ಟಿ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಅಶೋಕನಗರದ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ‘ಬಾಸ್ಟಿಯನ್’ ರೆಸ್ಟೋರೆಂಟ್ ಓಪನ್ ಆಗಲಿದೆ.
ರೆಸ್ಟೋರೆಂಟ್ನ ಅಕ್ಕ ಪಕ್ಕ ಚರ್ಚ್ ಸ್ಟ್ರೀಟ್, ರಿಚ್ಮಂಡ್ ರಸ್ತೆಗಳೆಲ್ಲಾ ಒಂದಕ್ಕಿಂತ ಒಂದು ವಿಭಿನ್ನ ರೆಸ್ಟೋರೆಂಟ್‌ಗಳಿವೆ. ಇದೀಗ ಅದೇ ಸಾಲಿಗೆ ಕುಡ್ಲದ ಕುವರಿ ಶಿಲ್ಪಾ ಶೆಟ್ಟಿಯ ಹೊಸ ರೆಸ್ಟೋರೆಂಟ್ ಬಾಸ್ಟಿಯನ್ ಸೇರುತ್ತಿರೋದು ಫ್ಯಾನ್ಸ್ಗೆ ಖುಷಿ ತಂದಿದೆ.



























