ಬಾಗಲಕೋಟೆ : ಅಪ್ರಾಪ್ತ ಮಗನಿಗೆ ಬೈಕ್ ನೀಡಿದ ತಂದೆಗೆ ಭಾರೀ ದಂಡ ವಿಧಿಸಲಾಗಿದೆ. ಜಮಖಂಡಿ ನಿವಾಸಿ ರಮೇಶ್ ಅನ್ನೋರಿಗೆ 25 ಸಾವಿರ ರೂಪಾಯಿ ದಂಡವನ್ನು ಜೆಎಂಎಫ್ಸಿ ನ್ಯಾಯಾಲಯ ವಿಧಿಸಿದೆ.
ಜಮಖಂಡಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಬೈಕ್ ಮಾಲೀಕ ದಂಡ ಕಟ್ಟಿದ್ದಾನೆ. ಫೆಬ್ರವರಿ 24 ರಂದು ಅಪ್ರಾಪ್ತ ಮಗನಿಗೆ ಬೈಕ್ ಚಲಾಯಿಸಲು ತಂದೆ ನೀಡಿದ್ದರು. ಇದನ್ನು ನೋಟಿಸ್ ಮಾಡಿದ್ದ ಜಮಖಂಡಿ ಪೊಲೀಸರು, ಬೈಕ್ ಹಿಡಿದು ಕೋರ್ಟ್ಗೆ ಕರೆದಿದ್ದರು.
ಮೋಟಾರ್ ಕಾಯ್ದೆ ಅಡಿ ದಂಡ ಕೋರ್ಟ್ ದಂಡ ವಿಧಿಸಿದೆ. ಅಪ್ರಾಪ್ತ ಮಕ್ಕಳಿಗೆ ವಾಹನ ನೀಡುವ ಪಾಲಕರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ. ಜಮಖಂಡಿ ನಗರದಲ್ಲಿ ಮಕ್ಕಳಿಗೆ ವಾಹನ ನೀಡುವ ಇತರೆ ಪಾಲಕರಿಗೂ ದಂಡದ ಭಯ ಕಾಡಲು ಶುರುವಾಗಿದೆ.


























