ಲಂಡನ್ ನಲ್ಲಿ ಜರುಗಿದ ಫ್ಯಾಶನ್ ವೀಕ್ ನಲ್ಲಿ ಪುತ್ತೂರು ಮೂಲದ ಬೆಡಗಿ ಮಿಂಚಿದ್ದಾರೆ.
ಪುತ್ತೂರಿನ ಬೆಳ್ಳಿಪ್ಪಾಡಿ ಕುಟುಂಬ ಟ್ರಸ್ಟ್ ನ ಅಧ್ಯಕ್ಷರಾದ ನೇಮಿರಾಜ್ ರೈ ಮತ್ತು ನಿಟ್ಟೆಗುತ್ತು ವಿಶಾಲಿ ಎನ್. ರೈ ರವರ ಪುತ್ರಿ ‘ಶ್ರೀಮಾ ರೈ’ ಅವರು ಲಂಡನ್ ನಲ್ಲಿ ನಡೆದ ಫ್ಯಾಶನ್ ವೀಕ್ ನಲ್ಲಿ ತನ್ನ ಆಕರ್ಷಕ ರನ್ ವೇ ನಡೆಯ ಮೂಲಕ ಮೌಕ್ತಿಕ ಕಲೆಕ್ಷನ್ (Mouktika) ಬ್ರಾಂಡ್ ನ ಚೊಚ್ಚಲ ಪ್ರದರ್ಶನದ ರೂಪದರ್ಶಿಯಾಗಿ ಆಕರ್ಷಣಾ ಬಿಂದುವಾಗಿ ಮಿಂಚಿದರು.
ಮಾಜಿ ಬ್ಯಾಂಕರ್, ಮಿಸೆಸ್ ಇಂಡಿಯಾ ಗ್ಲೋಬ್ 2009 ಕಿರೀಟವನ್ನು ಮುಡಿಗೇರಿಸಿರುವ ‘ಶ್ರೀಮಾ’ ರವರು ಸದ್ಯ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ರೈ ಇನ್ಸ್ಟ್ರಾಗ್ರಾಂ (Rai’s Instagram) ಮೂಲಕ ಖ್ಯಾತಿ ಪಡೆದಿದ್ದಾರೆ.
ಮುಂಬೈನಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದು, ಮೆರೈನ್ ಇಂಜಿನಿಯರಿಂಗ್ ಕನ್ಸಲ್ಟೆನ್ಸಿ ಕಂಪನಿಯನ್ನು ಮುನ್ನಡೆಸುತ್ತಿರುವ ಆದಿತ್ಯ ರೈ ರವರೊಂದಿಗೆ ವಿವಾಹವಾಗಿರುವ ‘ಶ್ರೀಮಾ’ ರವರು ಇಬ್ಬರು ಪುತ್ರರನ್ನು ಹೊಂದಿದ್ದಾರೆ.
ತನ್ನ ಕುಟುಂಬವನ್ನು ನಿಭಾಯಿಸುತ್ತಾ.., ಪೂರ್ಣ ಸಮಯದೊಂದಿಗೆ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಅವರು ತನ್ನ ದಿಟ್ಟತನ, ಸೌಂದರ್ಯ, ಫ್ಯಾಶನ್ ಹಾಗೂ ತಾಯ್ತನದ ನಿಭಾಯಿಸುವಿಕೆಯ ಮೂಲಕ ಮಹಿಳೆಯರಿಗೆ ಮಾದರಿಯಾಗಿದ್ದಾರೆ.