ಮಂಗಳೂರು : ಪಿಎಚ್ ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಉಳ್ಳಾಲ ಠಾಣೆಗೆ ಭೇಟಿ ನೀಡಿ ಠಾಣಾಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.
ಗಾಂಜಾ ಪ್ರಕರಣದ ಆರೋಪಿ, ಡ್ರಗ್ಸ್ ಪೆಡ್ಲರ್ ಶಾರೂಕ್ ಶೇಕ್ ಎಂಬಾತ ಡ್ರಗ್ಸ್ ಹಾಗೂ ಇನ್ನಿತರ ಮೋಸದಾಟವಾಡಿ ಆಕೆಯನ್ನು ಅಪಹರಿಸಿರುವುದು ಸ್ಪಷ್ಟವಾಗಿದೆ ಎನ್ನಲಾಗುತ್ತಿದೆ.
ಎಂಎಸ್ಸಿ ಪೂರೈಸಿದ್ದ ಚೈತ್ರಾ ಹೆಬ್ಬಾರ್ ದೇರಳಕಟ್ಟೆಯ ಖಾಸಗಿ ಯುನಿವರ್ಸಿಟಿಯಲ್ಲಿ ಪಿಎಚ್ ಡಿ ಮಾಡುತ್ತಿದ್ದಳು. ಕೋಟೆಕಾರು ಬಳಿಯ ಮಾಡೂರಿನಲ್ಲಿ ಪಿಜಿ ಒಂದರಲ್ಲಿದ್ದ ಯುವತಿಯನ್ನು ಫೆ.17ರಂದು ರೈಲಿನಲ್ಲಿ ಶಾರೂಕ್ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದು ಇಲಾಖೆ ತೀವ್ರ ತನಿಖೆ ನಡೆಸುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಆಕೆಯನ್ನು ಕರೆತರಲಾಗುವುದು ಎಂದು ಠಾಣಾಧಿಕಾರಿ ತಿಳಿಸಿದರು.
ಶಾರುಕ್ ಶೇಖ್ ಕತಾರಿನಲ್ಲಿದ್ದಾಗ ಪ್ರಕರಣ ಒಂದರಲ್ಲಿ ಸಿಕ್ಕಿಬಿದ್ದು ಜೈಲು ಪಾಲಾಗಿದ್ದ ಎನ್ನಲಾಗಿದೆ. ಆನಂತರ ಊರಿಗೆ ಬಂದು ಡ್ರಗ್ಸ್ ಪೆಡ್ಲರ್ ಆಗಿ ಹಲವು ಯುವ ಜನತೆಯನ್ನು ಡ್ರಗ್ಸ್ ಜಾಲಕ್ಕೆ ಸಿಲುಕಿಸುತ್ತಿದ್ದ ಎನ್ನಲಾಗಿದೆ.
ಯಾವುದೇ ಉದ್ಯೋಗ ಇಲ್ಲದ ಶಾರೂಖ್ ಗಾಂಜಾ ವ್ಯವಹಾರದ ಹಣದಲ್ಲೇ ಬದುಕುತಿದ್ದ ಎನ್ನಲಾಗಿದೆ.
ಠಾಣಾಧಿಕಾರಿ ಜೊತೆ ಮಾತನಾಡಿದ ಪುತ್ತಿಲ, ಡ್ರಗ್ ಪೆಡ್ಲರ್ ಶಾರೂಕ್ ನನ್ನು ಶೀಘ್ರ ಬಂಧಿಸಿ ಈತನ ಜಾಲದ ಹಿಂದಿನ ಕಾಣದ ಕೈಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಈಗಾಗಲೇ ಉಳ್ಳಾಲದಲ್ಲಿ ಡ್ರಗ್ಸ್ ಜಾಲದಲ್ಲಿ ಯುವತಿಯರನ್ನು ಸಿಲುಕಿಸಿ ಲವ್ ಜಿಹಾದ್ ಮೂಲಕ ಭಯೋತ್ಪಾದನೆಗೆ ಸಿಲುಕಿಸಿರುವುದು ಗೊತ್ತಿರುವಾಗ ಈ ಪ್ರಕರಣವನ್ನು ಗಂಭೀರ ಪ್ರಕರಣವೆಂದು ಪರಿಗಣಿಸಬೇಕು ಎಂದರು. ಉಳ್ಳಾಲದಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿರುವುದು ಇಡೀ ಜಿಲ್ಲೆಗೆ ಅಪಾಯಕಾರಿ ಬೆಳವಣಿಗೆ, ಇದನ್ನು ಮಟ್ಟ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಗೆ ಮಾರಕವಾಗಲಿದೆ ಎಂದು ಅರುಣ್ ಪುತ್ತಿಲ ಠಾಣಾಧಿಕಾರಿಗಳಲ್ಲಿ ಹೇಳಿದರು.
ಶಿಕ್ಷಣ ಕಾಶಿಯಾಗಿರುವ ತುಳುನಾಡಿನಲ್ಲಿ ಕೆಲಸ ಇಲ್ಲದ ಕೆಲ ಯುವಕರು ಗಾಂಜಾ ಡ್ರಗ್ಸ್ ವ್ಯವಹಾರ ಮೂಲಕ ವಿದ್ಯಾರ್ಥಿಗಳ ಜೀವನವನ್ನೇ ಹಾಳು ಮಾಡುತ್ತಿದ್ದಾರೆ. ಕೆಲಸ ಇಲ್ಲದೆ ಶೋಕಿ ಮಾಡುವ ಕೆಲವರ ಬಗ್ಗೆ ಇಲಾಖೆ ಗಮನಿಸಬೇಕು ಹಾಗೂ ಪಿಜಿಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಪೊಲೀಸ್ ಇಲಾಖೆಯವರು ಇದಕ್ಕೆ ಸೂಕ್ತ ರೀತಿ ಸ್ಪಂದಿಸುವುದಾಗಿ ಭರವಸೆ ನೀಡಿದರು. ಆಕೆ ಆಗಮಿಸಿದ ಕೂಡಲೇ ಸೂಕ್ತ ಹಾಸ್ಟೇಲ್ ವ್ಯವಸ್ಥೆಗೆ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಬೇಕೆಂದು ಪುತ್ತಿಲರ ಜೊತೆ ಠಾಣಾಧಿಕಾರಿ ಹೇಳಿದರು.
ಉಳ್ಳಾಲದ ಹಿಂದೂ ಮುಖಂಡ ಅರುಣ್ ಉಳ್ಳಾಲ, ಪುತ್ತಿಲ ಪರಿವಾರದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲ್ ಸಹಿತ ಪ್ರಮುಖರು ಉಪಸ್ಥಿತರಿದ್ದರು.