ಬೆಂಗಳೂರು : ಎಲ್ಲಾದರು ಆಚೆ ಹೋಗೋವಾಗ ಲೈಟ್ ಆಫ್ ಆಗಿದೆಯಾ, ಬೀರು ಬೀಗ ಭದ್ರವಾಗಿ ಹಾಕಿದ್ದೇವಾ, ಗ್ಯಾಸ್ ಆಫ್ ಮಾಡಿದ್ದೇವಾ, ಎಂದು ಹತ್ತಾರು ಬಾರಿ ಚೆಕ್ ಮಾಡಿ ಮನೆ ಲಾಕ್ ಮಾಡಿಕೊಂಡು ಹೋಗುತ್ತೇವೆ. ಆದರೆ ಕೆಲವೊಮ್ಮೆ ನಾವು ಮಾಡುವ ಒಂದು ಚಿಕ್ಕ ತಪ್ಪು ಕಳ್ಳರಿಗೆ ಕಳ್ಳತನಕ್ಕೆ ಆಹ್ವಾನ ಮಾಡಿದಂತಾಗುತ್ತೆ. ಮನೆಗೆ ಬೀಗ ಹಾಕಿ ಕೀ ಅನ್ನು ಶೂ ಒಳಗೆ ಇಟ್ಟು ಹೋಗುವ ಅಭ್ಯಾಸ ಕೆಲವರಲ್ಲಿರುತ್ತೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ಕಳ್ಳತನ ಮಾಡುವ ಕಳ್ಳರು ಕೂಡ ನಮ್ಮಲ್ಲಿ ಇದ್ದಾರೆ.
ಸದ್ಯ ಈ ರೀತಿ ಕಳ್ಳತನ ಮಾಡುತ್ತಿದ್ದ ಆರೋಪಿ ಮುನಿಯಪ್ಪನನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 7.7 ಲಕ್ಷ ಮೌಲ್ಯದ 132 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಆರೋಪಿ ಮುನಿಯಪ್ಪ ಈ ಮೊದಲು ಶೂ ಕಳ್ಳನಾಗಿದ್ದ. ಆದರೆ ಈಗ ಮನೆಗಳ್ಳನಾಗಿ ಪೊಲೀಸರ ಅತಿಥಿಯಾಗಿದ್ದಾನೆ. ಈತ ಬಾಗಿಲು ಒಡೆಯಲ್ಲ, ಕಿಟಕಿ ಪೀಸ್ ಪೀಸ್ ಮಾಡಲ್ಲ. ಅರಾಮಾಗಿ ಮನೆ ಬೀಗ ಓಪನ್ ಮಾಡಿ ಒಳಗೆ ಹೋಗಿ ಚಿನ್ನಾಭರಣ ದೋಚಿ ಪರಾರಿ ಆಗ್ತಾನೆ. ಶೂ ಕಳ್ಳತನ ಮಾಡ್ತಿದ ಆರೋಪಿ ಮುನಿಯಪ್ಪ ಒಮ್ಮೆ ಶೂ ಕಳ್ಳತನ ಮಾಡುವಾಗ ಶೂನಲ್ಲಿ ಮನೆ ಬೀಗ ಸಿಕ್ಕಿತ್ತು. ನೋಡೇ ಬಿಡೋಣ ಅಂತಾ ಬೀಗ ಓಪನ್ ಮಾಡಿ ಮನೆ ಒಳಗೆ ಹೋಗಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದ. ಇದಾದ ನಂತರ ಇದನ್ನೇ ಮುಂದುವರೆಸಿದ. ಅಲ್ಲದೆ ಈತ ಹಗಲೊತ್ತಲ್ಲಿ ಆಟೋ ಓಡಿಸ್ತಾ ಸಂಚು ಹಾಕ್ತಿದ್ದ. ರಾತ್ರಿ ಲೈಟ್ ಆಫ್ ಆಗಿದ್ದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ.
ಸದ್ಯ ಆರೋಪಿ ಮುನಿಯಪ್ಪನನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮುನಿಯಪ್ಪ ಬಂಧನದಿಂದ 4 ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ಬಂಧಿತನಿಂದ 7.7 ಲಕ್ಷ ಮೌಲ್ಯದ 132 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.