ಪುತ್ತೂರು : ಪರ್ಲಡ್ಕ ಬೈಪಾಸ್ ಬಳಿ ಫೆ.29 ರಂದು ಬೈಕ್ ಸ್ಕಿಡ್ ಆಗಿ ಗಾಯಗೊಂಡ ಮೆಕ್ಯಾನಿಕ್ ಶಾಂತಿಗೋಡಿನ ಯುವಕನ ಸ್ಥಿತಿ ಗಂಭೀರವಾಗಿದ್ದು, ಮಂಗಳೂರು ಆಸ್ಪತ್ರೆಯ ವೆಂಟಿಲೇಟರ್ ನಲ್ಲಿರುವ ಯುವಕನಿಗೆ ಪುತ್ತೂರು ಖಾಸಗಿ ಆಸ್ಪತ್ರೆಯೊಂದರಲ್ಲಿ ಸರಿಯಾದ ಪ್ರಥಮ ಚಿಕಿತ್ಸೆ ನೀಡಿಲ್ಲ ಎಂದು ಆರೋಪಿಸಿ ಸ್ಥಳೀಯರು ಹಾಗೂ ಯುವಕನ ಸ್ನೇಹಿತರು ಪುತ್ತೂರಿನ ಖಾಸಗಿ ಆಸ್ಪತ್ರೆಯ ಮುಂದೆ ಜಮಾಯಿಸಿದ ಘಟನೆ ನಡೆದಿದೆ.

ಶಾಂತಿಗೋಡು ಗ್ರಾಮದ ಬೀರ್ಮಕಜೆ ನಿವಾಸಿ ಪುತ್ತೂರು ಬೈಪಾಸ್ ರಸ್ತೆಯ ಗ್ಯಾರೆಜೊಂದರಲ್ಲಿ ಮೆಕಾನಿಕ್ ಆಗಿರುವ ಪ್ರಸಾದ್ (27) ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿರುವವರು.
ಪ್ರಸಾದ್ ಬೈಕ್ ಸ್ಕಿಡ್ ಆಗಿ ಗಾಯಗೊಂಡಿದ್ದು, ಯುವಕನ ಸ್ಥಿತಿ ಗಂಭೀರವಾಗಿದೆ.

ಮಂಗಳೂರು ಆಸ್ಪತ್ರೆಯ ವೆಂಟಿಲೇಟರ್ ನಲ್ಲಿರುವ ಯುವಕನಿಗೆ ಪುತ್ತೂರು ಖಾಸಗಿ ಆಸ್ಪತ್ರೆಯೊಂದರಲ್ಲಿ ಸರಿಯಾದ ಪ್ರಥಮ ಚಿಕಿತ್ಸೆ ನೀಡಿಲ್ಲ ಎಂದು ಆರೋಪಿಸಿ ಯುವಕನ ಸ್ನೇಹಿತರು ಹಾಗೂ ಊರವರು ಆಸ್ಪತ್ರೆಯ ಮುಂದೆ ಜಮಾಯಿಸಿ, ವಾಗ್ವಾದ ನಡೆಸಿದ್ದು, ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಎಲ್ಲರನ್ನು ಠಾಣೆಗೆ ಕರೆದೊಯ್ಯಿದರು.

ಇದೀಗ ಪುತ್ತೂರು ನಗರ ಪೊಲೀಸ್ ಠಾಣೆಗೆ ಆಸ್ಪತ್ರೆ ವೈದ್ಯರು ಆಗಮಿಸಿ ಇನ್ ಸ್ಪೆಕ್ಟರ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ.

























