ಲಷ್ಕರ್-ಎ-ತೋಯ್ಬಾದ ( LeT)ದ ಕಮಾಂಡರ್, 2008ರ ಮುಂಬೈ ದಾಳಿ ಸಂಚುಕೋರ ಅಜಂ ಚೀಮಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.
ಅಜಂ ಚೀಮಾ ಪಾಕಿಸ್ತಾನದ ಫೈಸಲಾಬಾದ್ ಸಿಟಿಯಲ್ಲಿ ಮೃತಪಟ್ಟಿದ್ದಾನೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.
2006ರಲ್ಲಿ ಮುಂಬೈ ಟ್ರೈನ್ನಲ್ಲಿ ನಡೆದ ಸ್ಫೋಟ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದ ಈತ. ಈ ಸ್ಫೋಟದಲ್ಲಿ 209 ಪ್ರಯಾಣಿಕರು ಸಾವನ್ನಪ್ಪಿದ್ದರು. 800 ಜನ ಗಾಯಗೊಂಡಿದ್ದರು.
ಅಮೆರಿಕ ನೀಡಿರುವ ಮಾಹಿತಿ ಪ್ರಕಾರ, 2008ರಲ್ಲಿ ಮುಂಬೈ ದಾಳಿಗೆ ತರಬೇತಿ ನೀಡಿದ್ದು ಇದೇ ಚೀಮಾ. ಈತ ಉಗ್ರರನ್ನು ಕರೆತಂದು ತರಬೇತಿ ನೀಡಿ 166 ಮಂದಿಯ ಸಾವಿಗೆ ಕಾರಣನಾಗಿದ್ದಾನೆ ಎಂದು ಹೇಳಿದೆ. ಸಾವನ್ನಪ್ಪಿದವರಲ್ಲಿ ಅಮೆರಿಕ 6 ನಾಗರಿಕರೂ ಸೇರಿದ್ದರು.


























