ಬೆಳ್ತಂಗಡಿ : ಬೇಕರಿ ಸಮೀಪ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳವುಗೈದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಜಿರೆ ನಿವಾಸಿ ರಾಜು ಎಂಬವರು ಫೆ.29 ರಂದು ರಾತ್ರಿ ತನ್ನ ಹೊಂಡಾ ಯೂನಿಕಾರ್ನ್ ದ್ವಿಚಕ್ರ ವಾಹನವನ್ನು (ಬೈಕಿನ ಅಂದಾಜು ಮೌಲ್ಯ 75000/-) ಬೆಳ್ತಂಗಡಿ ಉಜಿರೆ ಗ್ರಾಮದ ಬೇಕರಿಯ ಮುಂಭಾಗ ನಿಲ್ಲಿಸಿ ಹೋಗಿದ್ದು, ಸುಮಾರು ಒಂದು ಗಂಟೆಯ ಬಳಿಕ ಬಂದು ಅದೇ ಜಾಗದಲ್ಲಿ ನೋಡಿದಾಗ ವಾಹನ ಕಾಣೆಯಾಗಿದ್ದು, ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಾಡಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 26/2024 ಕಲಂ: 379 ಭಾ ದಂ ಸಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























