ಚಿಕ್ಕಮಗಳೂರು : ಬೆಂಗಳೂರಿನ ಯಾತ್ರಿಕ ಶೌಚಾಲಯಕ್ಕೆ ಹೋದಾಗ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.
ಬೆಂಗಳೂರು ನಿವಾಸಿ ಮಧುಸೂಧನ್ (52) ಮೃತ ದುರ್ದೈವಿ.
ಬೆಂಗಳೂರಿನಿಂದ 12 ಜನರ ತಂಡ ಧರ್ಮಸ್ಥಳಕ್ಕೆ ಟಿಟಿ ವಾಹನದ ಮೂಲಕ ಹೊರಟಿದ್ದರು. ಮೂತ್ರ ವಿಸರ್ಜನೆಗೆ ಎಂದು ಕೊಟ್ಟಿಗೆಹಾರ ಶೌಚಾಲಯಕ್ಕೆ ಹೋದಾಗ ದುರ್ಘಟನೆ ಸಂಭವಿಸಿದೆ.
ಕೂಡಲೇ ಅವರನ್ನು ಬಣಕಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮಾರ್ಗ ಮಧ್ಯೆಯೇ ಸಾವನ್ನಪ್ಪಿರೋದಾಗಿ ವೈದ್ಯರು ತಿಳಿಸಿದ್ದಾರೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


























