ವಿಟ್ಲ ಸಮೀಪದ ಮನೆಲಾ ಚರ್ಚ್ ಧರ್ಮಗುರು ಫಾ. ನೆಲ್ಸನ್ ಓಲಿವೆರಾ ಹಿರಿಯ ದಂಪತಿಯನ್ನು ಅಮಾನುಷವಾಗಿ ಥಳಿಸಿದ ಘಟನೆಯನ್ನು ಪುತ್ತಿಲ ಪರಿವಾರ ಖಂಡಿಸಿದೆ.
ಮಕ್ಕಳಿಲ್ಲದ ಪುಣಚ ಗ್ರಾಮದ ಎರ್ಮೆತ್ತಡ್ಕ ನಿವಾಸಿ ಗ್ರೆಗರಿ ಮೊಂತೇರೊ(79) ದಂಪತಿ ಮೇಲೆ ಪಾದ್ರಿ ಹಲ್ಲೆ ನಡೆಸಿದ್ದು, ಸಿಸಿಟಿವಿಯಲ್ಲಿ ಈ ಕೃತ್ಯ ಸೆರೆಯಾಗಿದೆ.
ಧರ್ಮಗುರುವೊಬ್ಬರು ಭಯೋತ್ಪಾದಕನ ರೀತಿ ವರ್ತಿಸಿದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆ ಕಾನೂನಿನಡಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಪುತ್ತಿಲ ಪರಿವಾರ ಆಗ್ರಹಿಸಿದೆ.


























