ನವದೆಹಲಿ : ಗಂಡನ ಜೊತೆ ಬೈಕ್ ಟೂರು ಮಾಡುತ್ತಿದ್ದ ಸ್ಪಾನಿಷ್ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಜಾರ್ಖಂಡ್ ರಾಜ್ಯದ ದುಮ್ಕಾದಲ್ಲಿ ಅಮಾನವೀಯ ಹೇಯ ಕೃತ್ಯವೊಂದು ಬೆಳಕಿಗೆ ಬಂದಿತ್ತು. ಇಂತಹ ಹೇಯ ಕೃತ್ಯದ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಈ ಕೃತ್ಯ ಎಸಗಿದ 7 ಮಂದಿ ಕಾಮುಕರನ್ನು ಅರೆಸ್ಟ್ ಮಾಡುವಂತೆ ದಂಪತಿ ಒತ್ತಾಯಿಸಿದ್ದಾರೆ.
ಇನ್ನು ಈ ಅಮಾನವೀಯ ಕೃತ್ಯ ಎಸಗಿದ ಸ್ಪಾನಿಷ್ ಮಹಿಳೆ ಘಟನೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಏಳು ಪುರುಷರು ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ. ನಮ್ಮ ತನಿಖೆಗೆ ತೊಂದರೆಯಾಗದಂತೆ ಪೋಸ್ಟ್ ಹಾಕಬೇಡಿ. ಕೂಡಲೇ ಪೋಸ್ಟ್ ಮಾಡಿರೋ ವಿಡಿಯೋವನ್ನು ಆಫ್ ಮಾಡಲು ಪೊಲೀಸರು ನನಗೆ ಹೇಳಿದರು. ನಾನು ಅದನ್ನು ನಂತರ ಪೋಸ್ಟ್ ಮಾಡುತ್ತೇನೆ. ನನ್ನ ಮುಖ ಈ ರೀತಿ ಕಾಣುತ್ತದೆ. ಆದರೆ ಇದು ನನಗೆ ಹೆಚ್ಚು ನೋವುಂಟು ಮಾಡುವುದಿಲ್ಲ. ನಾವು ಇನ್ನೂ ಬದುಕುವುದಿಲ್ಲ ಅಂತಾ ಅಂದು ಕೊಂಡಿದ್ದೇವೆ. ಆದರೆ ನಮ್ಮ ಪುಣ್ಯ ದೇವರಿಗೆ ಆರ್ಶೀವಾದಗಳಿಂದ ನಾವು ಜೀವಂತವಾಗಿದ್ದೇವೆ ಎಂದಿದ್ದಾರೆ.
ಅಸಲಿಗೆ ಆಗಿದ್ದೇನು..!?
ಸ್ಪಾನಿಷ್ ಮೂಲದ ದಂಪತಿ ಬೈಕ್ ಮೂಲಕ ಭಾರತದ ಪ್ರವಾಸ ಕೈಗೊಂಡಿದ್ದರು. ಜಾರ್ಖಂಡ್ನ ದುಮ್ಕಾಗೆ ಬಂದಾಗ ಮಧ್ಯರಾತ್ರಿ ದುಷ್ಕರ್ಮಿಗಳ ತಂಡ ತಡೆದಿದೆ. ನೀವು ಇಲ್ಲೇ ಟೆಂಟ್ನಲ್ಲಿ ಈ ರಾತ್ರಿ ಕಳೆಯಬೇಕು ಎಂದು ಒತ್ತಾಯಿಸಿದ್ದಾರೆ. ದರೋಡೆ ಮಾಡುವ ಜೊತೆಗೆ ಗಂಡನ ಜೊತೆಗಿದ್ದ ವಿದೇಶಿ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಗ್ಯಾಂಗ್ ರೇಪ್ ಮಾಡಿದ್ದಾರೆ. ಹೀನ ಕೃತ್ಯದ ಬಳಿಕ ದುರುಳರಿಂದ ತಪ್ಪಿಸಿಕೊಂಡ ಸ್ಪಾನಿಷ್ ದಂಪತಿ ಆಸ್ಪತ್ರೆಯನ್ನು ಹುಡುಕಿಕೊಂಡು ಹೋಗಿದ್ದಾರೆ. ಅರ್ಧ ಇಂಗ್ಲೀಷ್ ಹಾಗೂ ಅರ್ಧ ಸ್ಪಾನಿಷ್ ಮಾತಾಡುತ್ತಿದ್ದ ಇವರಿಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ನೀಡಿದ ಬಳಿಕ ವಿದೇಶಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರೋ ವಿಷಯ ಗೊತ್ತಾಗಿದೆ. ಚಿಕಿತ್ಸೆ ಪಡೆಯುತ್ತಿದ್ದ ಸ್ಪಾನಿಷ್ ದಂಪತಿಯಲ್ಲಿ ಆಸ್ಪತ್ರೆಯಿಂದಲೇ ನ್ಯಾಯಕ್ಕಾಗಿ ವಿಡಿಯೋ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನನ್ನ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂದಿರುವ ಮಹಿಳೆ ಹಾಗೂ ಆಕೆಯ ಪತಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಜಾರ್ಖಂಡ್ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


























