ಪುತ್ತೂರು : ಸಾಮೆತ್ತಡ್ಕ ದಿ. ಜೋಸೆಫ್ ಝೆವಿಯರ್ ಮಸ್ಕರೇನ್ಹಸ್ ಹಾಗೂ ಹಿಲ್ಡಾ ರೋಚ್ ರವರ ಪುತ್ರ, ಸಾಮೆತ್ತಡ್ಕ ಯುವಕ ಮಂಡಲದ ಮಾಜಿ ಅಧ್ಯಕ್ಷ ಅನಿಲ್ ವಿಲ್ಸನ್ ಸೆಬಾಸ್ಟಿಯನ್ ಮಸ್ಕರೇನ್ಹಸ್ (54) ಅಸೌಖ್ಯದಿಂದ ನಿಧನರಾದರು.

ಅನಿಲ್ ವಿಲ್ಸನ್ ರವರು ಹಲವಾರು ವರ್ಷ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಬಳಿಕ ಪುತ್ತೂರಿನ ಸಾಮೆತ್ತಡ್ಕದಲ್ಲಿ ವಾಸ್ತವ್ಯ ಹೊಂದಿದ್ದರು.
ಅನಿಲ್ ವಿಲ್ಸನ್ ರವರು ಖ್ಯಾತ ವಾಲಿಬಾಲ್ ಆಟಗಾರ ದಿ. ಸುನಿಲ್ ಮಸ್ಕರೇನ್ಹಸ್ ರವರ ಸಹೋದರ.
ಮೃತರು ತಾಯಿ, ಪತ್ನಿ, ಪುತ್ರಿ, ಸಹೋದರಿಯನ್ನು ಅಗಲಿದ್ದಾರೆ.


























