ವಿಟ್ಲ : ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮಹಿಳೆ ಹಾಗೂ ಮಕ್ಕಳ ಮೇಲೆ ಅನ್ಯಕೋಮಿನ ವ್ಯಕ್ತಿಯೊಬ್ಬ ದೌರ್ಜನ್ಯವೆಸಗಿದ ಘಟನೆ ವಿಟ್ಲ ಸಮೀಪದ ಕನ್ಯಾನ ಕಣಿಯೂರು ತಲಕ್ಕಿ ಎಂಬಲ್ಲಿ ನಡೆದಿದೆ.

ಸಿದ್ಧಿಕ್ ಎಂಬ ಅನ್ಯಕೋಮಿನ ವ್ಯಕ್ತಿಯೊಬ್ಬ ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿ ದೌರ್ಜನ್ಯ ವೆಸಗಿದ್ದಾನೆ ಎನ್ನಲಾಗಿದೆ.
ಈ ಘಟನೆಯನ್ನು ಹಿಂದೂ ಜಾಗರಣ ವೇದಿಕೆ ಖಂಡಿಸಿದ್ದು, ತಕ್ಷಣ ಆ ವ್ಯಕ್ತಿಯನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದೆ.


























