ವಿಟ್ಲ : ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವಿಟ್ಲ ವಲಯದ ವತಿಯಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ವಿಟ್ಲ ಚಂದಳಿಕೆ ನಿವಾಸಿ ದಾಮೋದರ ಪೂಜಾರಿ ಅವರ ಪತ್ನಿ ಗೀತಾ ಅವರಿಗೆ ಚಿಕಿತ್ಸೆಯ ಸಲುವಾಗಿ 50550 ರೂ. ಧನಸಹಾಯವನ್ನು ಪುತ್ತಿಲ ಪರಿವಾರದ ಸ್ಥಾಪಕರಾದ ಅರುಣ್ ಕುಮಾರ್ ಪುತ್ತಿಲ ನೀಡಿದರು.

ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ಪ್ರಮುಖರಾದ ರಘುರಾಮ ರೈ, ಅನಂತ ಪ್ರಸಾದ್, ಮೋಹನ್ ಸೇರಾಜೆ, ಶ್ರೀಕೃಷ್ಣ ಕೇಪು, ಹರೀಶ್ ಪೂಜಾರಿ ಮರುವಾಳ, ಲಕ್ಷ್ಮಣ ಮಾಡ, ಶ್ರೀಕೃಷ್ಣ ವಿಟ್ಲ, ಶರತ್ ಎನ್.ಎಸ್, ರಾಜೇಶ್ ಭಟ್ ಕುಂಡಡ್ಕ, ನಿತಿನ್ ಬೊಡ್ಡೋಣಿ, ರಾಜ್ ಕುಮಾರ್ ಶೆಟ್ಟಿ, ಶ್ರೀನಾಥ್ ಕುಳ, ವಿನೋದ್ ಮಾಡತ್ತಡ್ಕ, ವಿಶ್ವೇಶ್ವರ ನಾಯಕ್, ಪ್ರವೀಣ್ ಮಾಡತ್ತಡ್ಕ, ಅರುಣ್ ಪ್ರಕಾಶ್ ಮಚ್ಚ, ಯಶೋಧರ ಬಸವನಗುಡಿ ಉಪಸ್ಥಿತರಿದ್ದರು.


























