ಪುತ್ತೂರು : ನರಿಮೊಗರು ಕ್ಲಸ್ಟರ್ ಮಟ್ಟದ ಆಶಾಕಾರ್ಯಕರ್ತೆಯರಿಗೆ ಅವಶ್ಯ ಸಾಮಾಗ್ರಿಗಳನ್ನು ಪುತ್ತೂರು ತಾಲೂಕು ಶಿಕ್ಷಕರ ಸಂಘದ ವತಿಯಿಂದ ವಿತರಿಸುವ ಕಾರ್ಯಕ್ರಮ ಶಾಸಕರಾದ ಸಂಜೀವ ಮಠಂದೂರುರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಾಮಾಗ್ರಿಗಳನ್ನು ಸಾಂಕೇತಿಕವಾಗಿ ವಿವರಿಸಿದ ಶಾಸಕರು ವ್ಯಾಪಕವಾಗಿ ಹರಡುತ್ತಿರುವ ಕೋವಿಡ್-19 ಅನ್ನು ಗ್ರಾಮ ಮಟ್ಟದಲ್ಲಿ ನಿಯಂತ್ರಿಸುವುದು ಅತೀ ದೊಡ್ಡ ಸವಾಲು, ಈ ಸವಾಲನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಆಶಾ ಕಾರ್ಯಕರ್ತೆಯರು ಅಭಿನಂದಾನಾರ್ಹರು, ತಮ್ಮ ವ್ಯಾಪ್ತಿಯ ಮನೆಗಳನ್ನು, ಜನರನ್ನು, ಜನರ ಆರೋಗ್ಯವನ್ನು ಎಲ್ಲರಿಗಿಂತಲೂ ಹೆಚ್ಚು ಅರಿತ ಆಶಾ ಕಾರ್ಯಕರ್ತೆಯರಿಂದ ಸ್ವಾಸ್ಥ್ಯ ಹೆಚ್ಚಾಗಲಿ ಎಂದು ಹೇಳಿದರು.
ಸಭೆಯಲ್ಲಿ ನರಿಮೊಗರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ವಿದ್ಯಾ, ಉಪಾಧ್ಯಕ್ಷರಾದ ಸುಧಾಕರ ಕುಲಾಲ್, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಶಿಕ್ಷಕರ ಸಂಘದ ಅಧ್ಯಕ್ಷರು , ಪದಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.