ಪುತ್ತೂರು : ತಂಡವೊಂದು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಕರಾರು ತೆಗೆದು ಹಲ್ಲೆ ನಡೆಸಿರುವುದಾಗಿ ಆರೋಪಿಸಿ ವ್ಯಕ್ತಿಯೋರ್ವರು ನೀಡಿರುವ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ನಿವಾಸಿ ನಾಗೇಶ ಎಂಬವರು ನೀಡಿರುವ ದೂರಿನ ಮೇರೆಗೆ ದಯಾನಂದ, ಅಚ್ಚುತ ಹಾಗೂ ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಾ.11 ರಂದು ಬೆಳಗಿನ ಜಾವ ನಾಗೇಶ್ ಅವರು ಆಟೋರಿಕ್ಷಾದಲ್ಲಿ ಪ್ರಯಾಣಿಕರೋರ್ವರನ್ನು ಕುಳ್ಳಿರಿಸಿಕೊಂಡು, ಪುತ್ತೂರು ತಾಲೂಕು ಪಡವನ್ನೂರು ಗ್ರಾಮದ ಕೆಳಗಿನ ಕನ್ನಡ್ಕ ಬಸ್ ನಿಲ್ದಾಣ ಎಂಬಲ್ಲಿ ತಲುಪಿದಾಗ, ದಯಾನಂದ, ಅಚ್ಚುತ ಹಾಗೂ ಇಬ್ಬರು ಅಪರಿಚಿತರು ಆಟೋ ಬಳಿ ಬಂದು, ಠಾಣೆಯಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ತಕರಾರು ತೆಗೆದು ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿ ತೆರಳಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 38-2024 ಕಲಂ: ಐಪಿಸಿ 1860 (U/s-324,506) ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























