ವಿಟ್ಲ : ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ವಿಟ್ಲ ಮಾಮೇಶ್ವರ ನವಗ್ರಾಮ ನಿವಾಸಿ ಜಯರಾಮ ಶೆಟ್ಟಿ ಅವರ ಸಹೋದರಿ ನಾಗವೇಣಿ ರವರ ಮನೆಗೆ ಅರುಣ್ ಪುತ್ತಿಲ ಅವರು ಪುತ್ತಿಲ ಪರಿವಾರ ವಿಟ್ಲದ ಸದಸ್ಯರೊಂದಿಗೆ ಭೇಟಿ ನೀಡಿ., ಆರೋಗ್ಯ,ಕ್ಷೇಮ ವಿಚಾರಿಸಿ ಸಹಾಯಧನ ವಿತರಿಸಿದರು.

ಪುತ್ತಿಲ ಪರಿವಾರ ವಿಟ್ಲದ ವತಿಯಿಂದ 11,000 ರೂ. ಸಹಾಯಧನವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ಪ್ರಮುಖರಾದ ರಘುರಾಮ ರೈ, ಅನಂತ ಪ್ರಸಾದ್, ಮೋಹನ್ ಸೇರಾಜೆ, ಶ್ರೀಕೃಷ್ಣ ಕೇಪು, ಹರೀಶ್ ಪೂಜಾರಿ ಮರುವಾಳ, ಲಕ್ಷ್ಮಣ ಮಾಡ, ಶ್ರೀಕೃಷ್ಣ ವಿಟ್ಲ, ಶರತ್ ಎನ್.ಎಸ್, ರಾಜೇಶ್ ಭಟ್ ಕುಂಡಡ್ಕ, ನಿತಿನ್ ಬೊಡ್ಡೋಣಿ, ವಿಶ್ವೇಶ್ವರ ನಾಯಕ್, ಲಕ್ಷ್ಮಣ್ ಮಂಜಲಾಡಿ, ರವಿ ಅಂಚನ್ ಉಪಸ್ಥಿತರಿದ್ದರು.



























