ಪುತ್ತೂರು : ಇನ್ಮುಂದೆ ಯಾವುದೇ ಸಂಘಟನೆ, ಪರಿವಾರದೊಂದಿಗೆ ಕಾರ್ಯ ನಿರ್ವಹಿಸುವುದಿಲ್ಲ ಎಂದು ರಾಜಕೀಯದಿಂದ ದೂರ ಸರಿಯುವ ಮುನ್ಸೂಚನೆಯನ್ನು ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ರಾಜಾರಾಮ್ ಭಟ್ ಅವರು ತಿಳಿಸಿದ್ದಾರೆ.
ಈ ಬಗ್ಗೆ ಫೇಸ್ಬುಕ್ ಲೈವ್ ಮೂಲಕ ಮಾತನಾಡಿದ ರಾಜಾರಾಮ್ ಭಟ್, ಇನ್ಮುಂದೆ ಯಾವುದೇ ಸಂಘಟನೆ, ಪರಿವಾರದೊಂದಿಗೆ ಕಾರ್ಯ ನಿರ್ವಹಿಸುವುದಿಲ್ಲ ಹಾಗೆಯೇ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ.
ಇಂದಿನಿಂದ ನಾನೊಬ್ಬ ಸ್ವತಂತ್ರ ಮತದಾರ, ಯಾವ ಪಕ್ಷದ ವಕ್ತಾರನು ಅಲ್ಲ.., ಪರಿವಾರದ ವಕ್ತಾರನು ಅಲ್ಲ., ಹಾಗೆಯೇ ಯಾವುದೇ ಸಂಘಟನೆಗಳಲ್ಲಿಯೂ ಇನ್ಮುಂದೆ ನಾನು ಸದಸ್ಯನಾಗಿರುವುದಿಲ್ಲ ಎಂದಿದ್ದಾರೆ.
ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಹಾಗೆಯೇ ಕಾಯ ವಾಚ ಮನಸಾ, ತನು-ಮನ-ಧನದ ಮೂಲಕ ಯಾವ ಪರಿವಾರದೊಂದಿಗೆ., ಯಾವ ಸಂಘಟನೆಯೊಂದಿಗೆ ನಾನು ಗುರುತಿಸಿಕೊಂಡಿದ್ದೆ ಅದಕ್ಕೆ ಧಾರೆಯೆರೆದಿದ್ದೇನೆ. ಯಾವುದೇ ಕಷ್ಟ-ನಷ್ಟಗಳಿಲ್ಲ., ನನ್ನ ವೈಯಕ್ತಿಕ ಕಾರಣಗಳಿಂದ ಈ ಮೂಲಕ ರಾಜಕೀಯ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

























