ಪುತ್ತೂರು : ಭಾರತದ ಇತಿಹಾಸದ ಇತ್ತೀಚಿನ 10 ವರ್ಷಗಳಲ್ಲಿ ಶ್ರೇಷ್ಠ ಭಾರತ ಪೂರಕವಾಗಿ ದೇಶಾದ್ಯಂತ ಯುವ ಸಮುದಾಯದಿಂದ ಪಸರಿಸುವ ನಿಟ್ಟಿನಲ್ಲಿ ನಮೋ ಭಾರತ ಪುತ್ತೂರು ವತಿಯಿಂದ ಕಾರ್ಯಕ್ರಮವೊಂದನ್ನು ಮಾ. 14 ರಂದು ಸಂಜೆ 5 ಗಂಟೆಗೆ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಹಿಂದಿನ ಗದ್ದೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಮೋ ಭಾರತದ ಕಾರ್ಯಕರ್ತ ರಾಜೇಶ್ ಬನ್ನೂರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ದೇಶಾದ್ಯಂತ, ರಾಜ್ಯಾದ್ಯಂತ 50 ಕಾರ್ಯಕ್ರಮಗಳನ್ನು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ನಡೆಸಲಾಗಿದೆ. ಪುತ್ತೂರಿನಲ್ಲಿ ನಡೆಯುವ ಕಾರ್ಯಕ್ರಮ 51ನೇ ಕಾರ್ಯಕ್ರಮವಾಗಿದೆ ಎಂದರು.
ದೇಶದಲ್ಲಿ ಏನು ಆಗ್ತಾ ಇದೆ ಎಂಬುದನ್ನು ಪಸರಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.
ಪುತ್ತೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಯುವ ಸಮುದಾಯದ ಜೊತೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿದರು.


























