ಲೋಕಸಭಾ ಚುನಾವಣೆಗೆ ದಿನಗಳ ಹತ್ತಿರ ಬರುತ್ತಿವೆ. ಈಗಾಗಲೇ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಲೀಸ್ಟ್ ಅನ್ನು ಬಿಡುಗಡೆ ಮಾಡಿದೆ. ಇತ್ತ ಚುನಾವಣಾ ಆಯೋಗವು ಸಹ ಎಲೆಕ್ಟೋರಲ್ ಬಾಂಡ್ ಅನ್ನು ಬಿಡುಗಡೆಗೊಳಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಚುನಾವಣಾ ಆಯೋಗವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಪಡೆದ ಚುನಾವಣಾ ಬಾಂಡ್ಗಳ ಡೇಟಾವನ್ನು ಸಾರ್ವಜನಿಕಗೊಳಿಸಿದೆ. ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚು ದೇಣಿಗೆ ನೀಡಿದ ದಾನಿಗಳ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ಭಾರತೀಯ ಚುನಾವಣಾ ಆಯೋಗವು ತನ್ನ ವೆಬ್ಸೈಟ್ನಲ್ಲಿ ಚುನಾವಣಾ ಬಾಂಡ್ ಡೇಟಾವನ್ನು ರಿಲೀಸ್ ಮಾಡಿದೆ. ಸುಪ್ರೀಂ ಕೋರ್ಟ್ ಆದೇಶಕ್ಕೆ ಅನುಗುಣವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಡೇಟಾವನ್ನು ನೀಡಿದೆ.
ಎಸ್ಬಿಐ ಮಂಗಳವಾರದಂದು ಸಂಜೆ ಅಂಕಿ ಅಂಶಗಳನ್ನು ಸಲ್ಲಿಸಿದೆ. ಮಾರ್ಚ್ 15ರಂದು ಸಂಜೆಯೊಳಗೆ ಡೇಟಾವನ್ನು ಒಟ್ಟುಗೂಡಿಸಿ ತನ್ನ ವೆಸ್ಸೈಟ್ನಲ್ಲಿ ರಿಲೀಸ್ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಅದರಂತೆ ಚುನಾವಣಾ ಆಯೋಗ ಚುನಾವಣಾ ಬಾಂಡ್ ಡೇಟಾವನ್ನು ಸಾರ್ವಜನಿಕಗೊಳಿಸಿದೆ.
ಏಪ್ರಿಲ್ 2019ರಿಂದ ಜನವರಿ 2024ರವರೆಗೆ ಬಾಂಡ್ ಮೂಲಕ ದೇಣಿಗೆ ಸ್ವೀಕರಿಸಿದ ಪಕ್ಷಗಳ ಹೆಸರುಗಳು:
- ಭಾರತೀಯ ಜನತಾ ಪಕ್ಷ-6,061 (ಕೋಟಿ ರೂಪಾಯಿಗಳಲ್ಲಿ)
- ಅಖಿಲ ಭಾರತ ತೃಣಮೂಲ ಕಾಂಗ್ರೆಸ್- 1,610
- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್- 1,422
- ಭಾರತ ರಾಷ್ಟ್ರ ಸಮಿತಿ- 1,215
- ಬಿಜು ಜನತಾ ದಳ- 776
- ಡಿಎಂಕೆ- 639
- ವೈಎಸ್ಆರ್ ಕಾಂಗ್ರೆಸ್ ಪಕ್ಷ- 337
- ತೆಲುಗು ದೇಶಂ ಪಕ್ಷ- 219
- ಶಿವಸೇನಾ (ರಾಜಕೀಯ ಪಕ್ಷ)- 158
- ರಾಷ್ಟ್ರೀಯ ಜನತಾದಳ- 73
- ಆಮ್ ಆದ್ಮಿ ಪಕ್ಷ- 65
- ಜನತಾ ದಳ (ಸೆಕ್ಯುಲರ್)- 44
- ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ- 37
- ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ- 31
- ಜನಸೇನಾ- ಪಕ್ಷ- 21
- ಅಧ್ಯಕ್ಷ ಸಮಾಜವಾದಿ ಪಕ್ಷ- 14
- ಬಿಹಾರ ಪ್ರದೇಶ ಜನತಾ ದಳ(ಯುನೈಟೆಡ್)- 14
- ಜಾರ್ಖಂಡ್ ಮುಕ್ತಿ ಮೋರ್ಚಾ- 14
- ಶಿರೋಮಣಿ ಅಕಾಲಿ ದಳ- 7
- ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ- 6
- ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್- 6
- ಶಿವಸೇನೆ- 1
- ರಾಷ್ಟ್ರೀಯ ಜನತಾದಳ- 1
- ಮಹಾರಾಷ್ಟ್ರವಾದಿ ಗೋಮ್ತಾಕ್ ಪಕ್ಷ- 1
- ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್- 1
- ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರ ಪ್ರದೇಶ- 1
- ಗೋವಾ ಫಾರ್ವರ್ಡ್ ಪಾರ್ಟಿ- 0
ಅತಿ ಹೆಚ್ಚು ದೇಣಿಗೆ ನೀಡಿದ ಟಾಪ್ 10 ದಾನಿಗಳ ಪಟ್ಟಿ
- ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವೀಸಸ್ PR – ₹ 1,368 ಕೋಟಿ
- ಮೇಘಾ ಇಂಜಿನಿಯರಿಂಗ್ & ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ – ₹ 966 ಕೋಟಿ
- ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ – ₹ 410 ಕೋಟಿ
- ವೇದಾಂತ ಲಿಮಿಟೆಡ್ – ₹ 400 ಕೋಟಿ
- ಹಲ್ದಿಯಾ ಎನರ್ಜಿ ಲಿಮಿಟೆಡ್ – ₹ 377 ಕೋಟಿ
- ಭಾರ್ತಿ ಗ್ರೂಪ್ – ₹ 247 ಕೋಟಿ
- ಎಸ್ಸೆಲ್ ಮೈನಿಂಗ್ & ಇಂಡಸ್ಟ್ರೀಸ್ ಲಿಮಿಟೆಡ್ – ₹ 224 ಕೋಟಿ
- ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್‌ಮಿಷನ್ ಕಂಪನಿ ಲಿಮಿಟೆಡ್ – ₹ 220 ಕೋಟಿ
- ಕೆವೆಂಟರ್ ಫುಡ್ ಪಾರ್ಕ್ ಇನ್ಫ್ರಾ ಲಿಮಿಟೆಡ್ – ₹ 195 ಕೋಟಿ
- ಮದನ್‌ಲಾಲ್ ಲಿಮಿಟೆಡ್ – ₹ 185 ಕೋಟಿ


























