ಪುತ್ತೂರು : ‘ತುರ್ತು ಬೈಠಕ್ ಕರೆದ ನಳಿನ್ ಮತ್ತು ಕಿಶೋರ್’ ಹೀಗೊಂದು ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಿಶೋರ್ ಬೊಟ್ಯಾಡಿ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಫೇಸ್ಬುಕ್ ಖಾತೆ ಈ ಬಗ್ಗೆ ಮಾಹಿತಿ ಹಂಚಿಕೊಂಡ ಕಿಶೋರ್ ಬೊಟ್ಯಾಡಿ ಅವರು ‘ನಾನು ಮತ್ತು ನಳಿನ್ ಕುಮಾರ್ ಕಟೀಲ್ ಅವರು ಯಾವುದೇ ರೀತಿಯ ಬೈಠಕ್ ಕರೆದಿಲ್ಲ ಮತ್ತು ಫೋನ್ ಕರೆಗಳ ಮೂಲಕವೂ ಮಾತನಾಡಿರುವುದಿಲ್ಲ. ನನ್ನನ್ನು ಮತ್ತು ನಳಿನ್ ಕುಮಾರ್ ಕಟೀಲ್ ಅವರನ್ನು ಮುಂದಿಟ್ಟುಕೊಂಡು ಕಿಡಿಗೇಡಿಗಳು ಪುತ್ತೂರಿನ ಜನತೆಯ ದಾರಿ ತಪ್ಪಿಸಲು ಮಾಡುತ್ತಿರುವ ಸಂಗತಿಯಾಗಿದೆ.
https://www.facebook.com/share/p/jHNxBjPCRGxe1BGY/?mibextid=WC7FNe
ಪಕ್ಷ ಮತ್ತು ಸಂಘಟನೆ ನಡೆದುಕೊಂಡಂತೆ ನಾವೆಲ್ಲರೂ ಬದ್ಧರಾಗಿದ್ದೇವೆ. ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರ ಆದೇಶಕ್ಕೆ ನಾವೆಲ್ಲರೂ ಬದ್ಧರಾಗಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಜಿಲ್ಲಾಧ್ಯಕ್ಷರ ತೀರ್ಮಾನವನ್ನು ಮನ ಪೂರ್ವಕವಾಗಿ ಒಪ್ಪಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಿಜೇಶ್ ಚೌಟರನ್ನು ಗೆಲ್ಲಿಸುವ ಮೂಲಕ ಕೇಂದ್ರದಲ್ಲಿ ನರೇಂದ್ರ ಮೋದಿ ಅವರನ್ನ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಶ್ರಮಪಟ್ಟು ಕೆಲಸ ಮಾಡೋಣ’ ಎಂದು ಕಾರ್ಯಕರ್ತರಲ್ಲಿ ಅವರು ಮನವಿ ಮಾಡಿದ್ದಾರೆ.
























