ಬಂಟ್ವಾಳ : ಹಣ ಹೂಡಿಕೆ ಮಾಡಿ ಲಾಭಗಳಿಸಬಹುದೆಂಬ ಸಂದೇಶ ನಂಬಿ ವ್ಯಕ್ತಿಯೋರ್ವರು ಲಕ್ಷಾಂತರ ರೂ ಕಳೆದುಕೊಂಡ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಪಾಡಿ ನಿವಾಸಿ ಹರೀಶ್ ಕುಮಾರ್ ಹಣ ಕಳೆದುಕೊಂಡವರು.
ಹರೀಶ್ ಕುಮಾರ್ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಅವರ ಮೊಬೈಲ್ ಗೆ 2023ರ ಡಿಸೆಂಬರ್ 20ರಂದು ಅಪರಿಚಿತ ವಾಟ್ಸಪ್ ನಿಂದ ಬಂದ ಸೂಚನೆಯಂತೆ, NumGenius A1 ಆಪ್ ಡೌನ್‌ಲೋಡ್ ಮಾಡಿಕೊಂಡಿದ್ದು, ಸದ್ರಿ ಆಪ್ ಮೂಲಕ ಹಣವನ್ನು ಹೂಡಿಕೆ ಮಾಡಿ ಲಾಭಗಳಿಸುವ ಉದ್ದೇಶದಿಂದ, ಸದ್ರಿ ಅಪರಿಚಿತ ವಾಟ್ಸಪ್ ನಲ್ಲಿ ಸೂಚಿಸಿದ ವಿವಿಧ ಖಾತೆಗಳಿಗೆ ಹಂತಹಂತವಾಗಿ ಒಟ್ಟು 5,85,200/ನ್ನು ವರ್ಗಾಯಿಸಿರುತ್ತಾರೆ.
ಸದ್ರಿ ಹಣದ ಪೈಕಿ ರೂ 1,20,175/ನ್ನು ಹಿಂತಿರುಗಿಸಿದ್ದು, ಉಳಿದ ಬಾಕಿ ರೂ 4,65,025/- ಹಣವನ್ನು ಹಿಂತಿರುಗಿಸದೇ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ 37/2024, ಕಲಂ: 417,419,420 ಐ ಪಿ ಸಿ & 66(c) 66( D) INFORMATION TECHNOLOGY ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























