ಬೆಂಗಳೂರು : ಒಳಿತು ಮಾಡು ಮನುಷ್ಯ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ಪುತ್ತೂರು ತಾಲೂಕಿನ 2024-2025 ರ ನೂತನ ಸಾಲಿನ ಅಧ್ಯಕ್ಷರಾಗಿ ಪುತ್ತೂರು ಭಾಗದ ಸಮಾಜಸೇವಕ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಕಾರ್ಯ ನಿರ್ವಾಹಕರಾದಂತಹ ಇಫಾಝ್ ಬನ್ನೂರು ಆಯ್ಕೆಯಾಗಿದ್ದಾರೆ.
ರಕ್ತದಾನ ಹಾಗೂ ರೋಗಿಗಳಿಗೆ ಆಸ್ಪತ್ರೆ ವಿಚಾರದಲ್ಲಿ ಮತ್ತು ಇತರ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಇಫಾಝ್ ಬನ್ನೂರು ರವರು ಇದೀಗ ಒಳಿತು ಮಾಡು ಮನುಷ್ಯ ಸಂಸ್ಥೆಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

























