ಬಂಟ್ವಾಳ : ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂ ಮೌಲ್ಯದ ಎರಡು ಲಾರಿ, ಸಾವಿರಾರು ರೂ ಮೌಲ್ಯದ ಮರಳು ಹಾಗೂ ನಾಲ್ಕು ಮಂದಿ ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಎಸ್.ಐ. ರಾಮಕೃಷ್ಣ ನೇತೃತ್ವದ ತಂಡ ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.
ನರಿಕೊಂಬು ಗ್ರಾಮದ ನೆಹರೂ ನಗರ ಎಂಬಲ್ಲಿ ವಾಹನ ತಪಾಸಣೆಯಲ್ಲಿ ತೊಡಗಿದ್ದ ವೇಳೆ ವಳಚ್ಚಿಲ್ ನೇತ್ರಾವತಿ ನದಿ ಕಿನಾರೆಯಿಂದ ಆರೋಪಿಗಳು ಪರವಾನಿಗೆ ಇಲ್ಲದೆ ಮರಳು ಸಾಗಾಟ ಮಾಡುತ್ತಿರುವ ಮಾಹಿತಿ ಲಭ್ಯವಾಗಿದೆ.
ಕನ್ಯಾನ ನಿವಾಸಿ ಅಬ್ದುಲ್ ರಹಿಮಾನ್ ,ಅಡ್ಯಾರು ನಿವಾಸಿ ಮಹಮ್ಮದ್ ಸಾದಿಕ್ , ಕಂಬಳಬೆಟ್ಟು ನಿವಾಸಿ ಗೌತಮ್, ವೀರಕಂಬ ನಿವಾಸಿ ಗುಡ್ಡಪ್ಪ ಗೌಡ ಎಂಬವರನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ನೇತ್ರಾವತಿ ನದಿಯಿಂದ ಪರವಾನಿಗೆಯಿಲ್ಲದೆ ಮರಳು ಸಾಗಾಟ ಮಾಡುತ್ತಿದ್ದ ಎರಡು ಲಾರಿ ಹಾಗೂ ಮರಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

























