ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ಯವರು ಕೆ ಹರೀಶ್ ಆಚಾರ್ಯ ರವರನ್ನು ನಗರ ಕಾಂಗ್ರೆಸ್ ಕಾರ್ಯದರ್ಶಿಯಾಗಿ ನೇಮಕಗೊಳಿಸಿ ಅದೇಶಿಸಿರುತ್ತಾರೆ.

ಚಿಕ್ಕಮುಡ್ನೂರು ಗ್ರಾಮದ ಕೃಷ್ಣನಗರ ನಿವಾಸಿಯಾಗಿರುವ
ಹರೀಶ್ ಆಚಾರ್ಯ ರವರು ಎಂ.ಎ ಪದವೀಧರರಾಗಿದ್ದು, ಹಲವಾರು ಸಮಾಜ ಮುಖಿ ಕಾರ್ಯಕ್ರಮದಲ್ಲಿ ತನ್ನನ್ನು ತೊಡಗಿಸಿಕೊಂಡವರಾಗಿರುತ್ತಾರೆ.
ಜಯಕರ್ನಾಟಕ ಸಂಘಟನೆಯ ಕೃಷ್ಣನಗರ ವಲಯದ ಮಾಜಿ ಅಧ್ಯಕ್ಷರಾಗಿರುವ ಹರೀಶ್ ರವರು ವಿಶ್ವಕರ್ಮ ಯುವ ಮಿಲನ ಪುತ್ತೂರು ವಲಯದ ಅಧ್ಯಕ್ಷರಾಗಿ ಹಾಗೂ ಹಲವಾರು ವರ್ಷಗಳಿಂದ ಕೃಷ್ಣನಗರದ ಬೂತ್ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರಾಗಿರುತ್ತಾರೆ.

























