ಕಾಸರಗೋಡು : ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಗುರುವಾರ ನಾಮಪತ್ರ ಸಲ್ಲಿಸಿದರು.

ವಿದ್ಯಾನಗರ ಬಿ.ಸಿ.ರೋಡ್ ಜಂಕ್ಷನ್ ನಿಂದ ಮೆರವಣಿಗೆ ಮೂಲಕ ಆಗಮಿಸಿ ಜಿಲ್ಲಾ ಚುನಾವಣಾ ಕಚೇರಿಗೆ ತಲುಪಿ ನಾಮಪತ್ರ ಸಲ್ಲಿಸಿದರು.
ಎನ್ ಡಿ ಎ ಮುಖಂಡರಾದ ಎಂ. ನಾರಾಯಣ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಕುಂಟಾರು ರವೀಶ ತಂತ್ರಿ, ಎಂ.ಸಂಜೀವ ಶೆಟ್ಟಿ, ಕೆ.ಕೆ ನಾರಾಯಣನ್ ಜೊತೆಗಿದ್ದರು.
































