ವಿಟ್ಲ : ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡು ಬಾಯರ್ ಪದವು, ಕ್ಯಾಂಕೊ ಕಾಲೋನಿ ನಿವಾಸಿ ಇಬ್ರಾಹಿಂ ಮುಜಾಂಬಿಲ್ ಬಂಧಿತ.

ವಿಟ್ಲ ಪೊಲೀಸ್ ಠಾಣಾ ಅ.ಕ್ರ ನಂಬ್ರ 127/2015 ಕಲಂ: 457,380. ಐಪಿಸಿ ಪ್ರಕರಣದಲ್ಲಿ ಆರೋಪಿಯಾದ ಇಬ್ರಾಹಿಂ ಎಂಬಾತ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಆತನನ್ನು ಮಾ.27 ರಂದು ವಿಟ್ಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರು (L&O) ವಿದ್ಯಾ ಮತ್ತು ಸಿಬ್ಬಂದಿಯವರಾದ ಎ.ಎಸ್ಐ ಜಯರಾಮ, ಪಿಸಿ ಅಶೋಕ ಹಾಗೂ ಹೆಚ್.ಸಿ ರಾಧಾಕೃಷ್ಣ (ಪುತ್ತೂರು ನಗರ ಠಾಣೆ ) ರವರುಗಳ ತಂಡ, ಪುತ್ತೂರು ನಗರದ ಮಾರ್ಕೆಟ್ ರಸ್ತೆಯಲ್ಲಿ ದಸ್ತಗಿರಿ ಮಾಡಿ, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ಏ.4ರವರೆಗೆ ನ್ಯಾಯಾಂಗ ಬಂಧನಕ್ಕೆ ವಿಧಿಸಿದೆ.
ಮುಜಾಂಬಿಲ್ ವಿರುದ್ದ ವಿಟ್ಲ ಠಾಣೆಯಲ್ಲಿ-02, ಕೇರಳ ಮಂಜೇಶ್ವರ ಠಾಣೆಯಲ್ಲಿ-01, ಪುತ್ತೂರು ನಗರ ಠಾಣೆ-01, ಆಂಧ್ರಪ್ರದೇಶದ ವಿಶಾಖಪಟ್ಟಣ ಠಾಣೆ-01 ಪ್ರಕರಣಗಳು ದಾಖಲಾಗಿರುತ್ತದೆ.



























