ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೀಡಿಯೋಗಳು ಹರಿದಾಡುತ್ತಿರುತ್ತವೆ. ಇದೀಗ ಬೆಂಗಳೂರಿನ ಮಹಿಳೆಯೊಬ್ಬರ ಸ್ಕೂಟಿಯಲ್ಲಿನ ಜಾಲಿ ರೈಡ್ನ ವೀಡಿಯೋವೊಂದು ಭಾರೀ ವೈರಲ್ ಆಗಿದೆ.
ಡ್ರೈವಿಂಗ್ ವೇಳೆ ಫೋನಿನಲ್ಲಿ ಮಾತನಾಡಲು ಈ ಮಹಿಳೆ ಹೊಸ ಟ್ರಿಕ್ಸ್ ಒಂದನ್ನು ಕಂಡು ಹುಡುಕಿದ್ದಾರೆ. ಹೆಲ್ಮೆಟ್ ಧರಿಸದೇ ತಲೆಗೆ ದುಪಟ್ಟಾವನ್ನು ಕಟ್ಟಿ ಅದರೊಳಗೆ ಮೊಬೈಲ್ ಇಟ್ಟುಕೊಂಡು ಮಾತನಾಡುತ್ತಾ ಹಾಯಾಗಿ ಸ್ಕೂಟಿನಲ್ಲಿ ಹೋಗುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
@3rdEyeDude ಎಂಬ ಟ್ವಿಟರ್ ಖಾತೆಯಲ್ಲಿ ಮಾ.27ರಂದು ಈ ವೀಡಿಯೋ ಹಂಚಿಕೊಳ್ಳಲಾಗಿದೆ. ವೀಡಿಯೋ ಹಂಚಿಕೊಂಡ ಕೇವಲ ಎರಡೇ ದಿನದಲ್ಲಿ 25 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ವೀಡಿಯೋ ಕಂಡು ಸಾಕಷ್ಟು ನೆಟ್ಟಿಗರು ಕಾಮೆಂಟ್ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ವೈರಲ್ ಆಗುತ್ತಿರುವ ಈ ವೀಡಿಯೋ ಬೆಂಗಳೂರಿನದ್ದು, ಮಾರ್ಚ್ 26 ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ಎನ್‌ಟಿಐ ಮೈದಾನದ ಎದುರು ವಿದ್ಯಾರಣ್ಯಪುರದ ಬಳಿ ಎಂದು ತಿಳಿದುಬಂದಿದೆ. ಜೊತೆಗೆ ಬೆಂಗಳೂರು ಪೊಲೀಸರನ್ನು ಈ ವೀಡಿಯೋಗೆ ಟ್ಯಾಗ್ ಮಾಡಿದ್ದರಿಂದ ಸೂಕ್ತ ಕ್ರಮಕ್ಕೆ ಕೈಗೊಳ್ಳಬೇಕು ಎಂದು ಬರೆಯಲಾಗಿದೆ.




























