ಪುತ್ತೂರು : ಲೋಕಸಭಾ ಚುನಾವಣೆ ಈಗಾಗಲೇ ಘೋಷಣೆಯಾಗಿದ್ದು, ಗೆದ್ದು ಗದ್ದಿಗೆ ಏರಲು ರಾಜಕೀಯ ಪಕ್ಷಗಳು ವಿವಿಧ ರೀತಿಯ ಸರ್ಕಸ್ ಗಳನ್ನು ಪ್ರಾರಂಭಿಸಿದ್ದಾರೆ. ಅವುಗಳ ಮಧ್ಯೆ ಜನರನ್ನು ನಗಿಸುವ ಸಲುವಾಗಿ ಪುತ್ತೂರಿನಲ್ಲಿ ‘ಅಪೋಲೋ ಸರ್ಕಸ್’ ಆರಂಭವಾಗುತ್ತಿದೆ.
ಮುಕ್ರಂಪಾಡಿಯ ಹನುಮ ವಿಹಾರ ಮೈದಾನದಲ್ಲಿ ‘ಅಪೋಲೋ ಸರ್ಕಸ್’ ನಡೆಯಲಿದ್ದು, ಭರ್ಜರಿ ಸಿದ್ಧತೆಗಳು ನಡೆಯುತಲಿದೆ.

‘ಸರ್ಕಸ್’ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಸಂತಸ ಮಕ್ಕಳು ಜೊತೆ ಪೋಷಕರಿಗೂ ಸ್ವಲ್ಪ ಖುಷಿಯ ವಿಚಾರವೇ ಆಗಿದೆ.., ಯಾಕಂದ್ರೇ ದಿನವಿಡೀ ಮನೆ-ಕಚೇರಿ ಕೆಲಸ ಅಂತ ಬ್ಯುಸಿ ಇರುವವರಿಗೆ ಕುಟುಂಬದ ಜೊತೆ ಹೊರಗಡೆ ಉತ್ತಮ ಸಮಯ ಕಳೆಯಬಹುದಾಗಿದೆ.

ಮೈ ರೋಮಾಂಚನಗೊಳಿಸುವುದರ ಜೊತೆ ಮಕ್ಕಳನ್ನು ನಗೆಗಡಲಲ್ಲಿ ತೇಲಿಸುವ ಜೋಕರ್ ಹಾಗೂ ಇನ್ನಿತರ ಪಾತ್ರಗಳು ಸರ್ಕಸ್ ನಲ್ಲಿ ಹೆಚ್ಚು ಗಮನ ಸೆಳೆಯುತ್ತವೆ.

ಪ್ರದರ್ಶನದ ವಿವರ :
ಪ್ರತಿದಿನ 3 ಆಟಗಳಿದ್ದು, ಮಧ್ಯಾಹ್ನ 1 ಗಂಟೆಗೆ, ಸಂಜೆ 4 ಗಂಟೆಗೆ ಮತ್ತು ರಾತ್ರಿ 7 ಗಂಟೆಗೆ ಪ್ರದರ್ಶನಗೊಳ್ಳಲಿದೆ.




























