ಬಂಟ್ವಾಳ : ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಬಂಟ್ವಾಳ ತಾಲೂಕು ಕುಕ್ಕಾಜೆ ಮಂಚಿ, ಕಂಚಿಲ ನಿವಾಸಿ ಅಬುಸಾಲಿ ಬಂಧಿತ.

ಬಂಟ್ವಾಳ ನಗರ ಪೊಲೀಸ್ ಠಾಣಾ ಅ.ಕ್ರ :189/2007 ಕಲಂ : 504, 506, 323, 324 ಜೊತೆಗೆ 34 ಐಪಿಸಿ ಪ್ರಕರಣದ ಆರೋಪಿ ಅಬುಸಾಲಿ ಎಂಬಾತನು ಸುಮಾರು 17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಮಾ.29 ರಂದು ಬಂಟ್ವಾಳ ನಗರ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ರಾಮಕೃಷ್ಣ ಮತ್ತು ಹೆಚ್.ಸಿ ರಾಜೇಶ್ ಎಸ್, ಹೆಚ್.ಸಿ ಗಣೇಶ್ ಎನ್. ರವರುಗಳ ತಂಡ, ಬೆಳ್ತಂಗಡಿ ತಾಲೂಕಿನ ಸಂತೆಕಟ್ಟೆ ಎಂಬಲ್ಲಿ ದಸ್ತಗಿರಿ ಮಾಡಿ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ.



























