ಪುತ್ತೂರು : ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ ದಿನವಾದ ‘ಗುಡ್ ಫ್ರೈಡೆ’ ಶುಭ ಶುಕ್ರವಾರ ದಿನವನ್ನು ತಾಲೂಕಿನೆಲ್ಲೆಡೆ ಕ್ರೈಸ್ತ ಧರ್ಮೀಯರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಪುತ್ತೂರು ಮಾಯ್ ದೆ ದೇವುಸ್ ಚರ್ಚಿನಲ್ಲಿ ಯೇಸುವಿನ ಕಷ್ಟ ಮರಣದ ಕಥಾಪ್ರಸಂಗವನ್ನು ಲೋಹಿತ್ ಅಜಯ್ ಮಸ್ಕರೇನಸ್ , ಸ್ಟ್ಯಾನಿ ಪಿಂಟೋ, ಅಶೋಕ್ ರಾಯನ್ ಕ್ರಾಸ್ತಾ ರವರು ಓದಿದರು.

ರೂಪೇಶ್ ತೌರೋ ರವರು ತಮ್ಮ ಪ್ರವಚನದಲ್ಲಿ ಶಿಲುಬೆಯ ಮಹತ್ವವನ್ನು ತಿಳಿಸುತ್ತಾ ಜೀವನದಲ್ಲಿ ಮುನ್ನಡೆಯಬೇಕು ಎಂದು ತಿಳಿಸಿದರು. ಲಾರೆನ್ಸ್ ಮಸ್ಕರೇನಸ್ ರವರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
ತದನಂತರ ಪ್ರಪಂಚದಾದ್ಯಂತ ಕ್ಯಾಥೋಲಿಕ್ ಸಮುದಾಯವನ್ನು ನಡೆಸುವ ಪೋಪ್ ಫ್ರಾನ್ಸಿಸ್, ಬಿಷಪ್, ಹಾಗೂ ಎಲ್ಲಾ ಧಾರ್ಮಿಕ ಗುರುಗಳಿಗೆ, ಪ್ರಪಂಚದಾದ್ಯಂತ ದೇಶಗಳನ್ನು ನಡೆಸುವ ಮುಖಂಡರುಗಳಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಒಟ್ಟು ಗೂಡಿದ ಕಾಣಿಕೆ ಹಣವನ್ನು ರೋಗಿಗಳಿಗೆ ಮತ್ತು ಒಂದು ಹೊತ್ತು ಆಹಾರ ವಿಲ್ಲದ ಬಡಜನರಿಗೆ ಇರಿಸಲಾಯಿತು.

ಯೇಸುವಿನ ಪಾರ್ಥಿವ ಶರೀರವಿರುವ ತೊಟ್ಟಿಲು ಮತ್ತು ದುಃಖ ತಪ್ತ ಮೇರಿ ವಿಗ್ರಹವನ್ನು ಚರ್ಚ್ ವಠಾರದಿಂದ ಎಂ.ಟಿ ರಸ್ತೆಯ ಮೂಲಕ ಕೋರ್ಟ್ ರಸ್ತೆಯಾಗಿ ಚರ್ಚ್ ವಠಾರಕ್ಕೆ ತರಲಾಯಿತು.
ಚರ್ಚ್ ಪಾಲನಾ ಮಂಡಳಿಯ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಮೆರವಣಿಗೆ ಹಾಗೂ ಧಾರ್ಮಿಕ ವಿಧಿವಿಧಾನಗಳು ನೆರವೇರಲು ಸಹಕರಿಸಿದರು.

ಬೆಳಿಗ್ಗೆ 7.15ರಿಂದ 8.45ರ ತನಕ ಶಿಲುಬೆ ಹಾದಿಯನ್ನು ಚರ್ಚ್ ವಠಾರದಲ್ಲಿ ಹಮ್ಮಿಕೊಳ್ಳಲಾಗಿತ್ತು.



























