ಮಂಗಳೂರು : ಮುಡಿಪು ರಸ್ತೆ ಸಮೀಪ ಇಫ್ತಾರ್ ಕೂಟ ಆಯೋಜನೆ ಮಾಡಿದ ಘಟನೆಯನ್ನು ಹಿಂದೂ ಜಾಗರಣ ವೇದಿಕೆ ಖಂಡಿಸಿದ್ದು, ಚುನಾವಣಾ ಆಯೋಗ ಹಾಗೂ ಪೋಲಿಸ್ ಅಯುಕ್ತರಿಗೆ ದೂರು ನೀಡಿದ್ದಾರೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಈಗಾಗಲೇ ದೇಶದಲ್ಲಿ ಜಾರಿಗೊಳಿಸಲಾಗಿದ್ದು, ಇದನ್ನು ಉಲ್ಲಂಘಿಸಿ ಮಾ.29 ರಂದು ಸುಮಾರು ಸಾಯಂಕಾಲ ಉಳ್ಳಾಲ ತಾಲೂಕು ವ್ಯಾಪ್ತಿಯ ಮುಡಿಪು ಪೇಟೆಯ ಮುಖ್ಯ ರಸ್ತೆಯ ಕೂಡುರಸ್ತೆಯನ್ನು ತಡೆಮಾಡಿ ಒಂದು ಸಮುದಾಯ ಅನ್ಯರಾಜ್ಯದ ವ್ಯಕ್ತಿಗಳ ಜೊತೆಗೂಡಿ ಇಪ್ತಾರ್ ಕೂಟವನ್ನು ನಡೆಸಿದ್ದು, ಇದು ಸಂಜೆಯ ಸಮಯದಲ್ಲಿ ಮನೆಗೆ ತೆರಳುವ ಮಕ್ಕಳು, ಮಹಿಳೆಯರಿಗೆ ತುಂಬಾ ತೊಂದರೆಯನ್ನುಂಟು ಮಾಡಿದೆ ಹಾಗೂ ರಸ್ತೆಯಲ್ಲಿ ವಾಹನ, ಭೋಜನ ಕೂಟದ ಟೇಬಲ್ ನಡುರಸ್ತೆಯಲ್ಲಿಟ್ಟು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಮಾಡಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಶೀಘ್ರ ಈ ಬಗ್ಗೆ ಮೊಕದ್ದಮೆ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜಾಗರಣ ವೇದಿಕೆ ಮುಡಿಪು ವಲಯ ಆಗ್ರಹಿಸಿದೆ.